Kannada NewsKarnataka NewsNational
*ಗಣಿಗಾರಿಕೆ ದುರಂತ: 24 ಗಂಟೆಗಳ ಬಳಿಕ ಕಾರ್ಮಿಕನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಕಲ್ಲುಗಣಿಗಾರಿಕೆ ವೇಳೆ ಬಂಡೆ ಬಿದ್ದು ಮೃತಪಟ್ಟಿದ್ದ ಕಾರ್ಮಿಕನ ಶವ 24 ಗಂಟೆಗಳ ಬಳಿಕ ಪತ್ತೆಯಾಗಿದೆ.
ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್ ಮೃತ ವ್ಯಕ್ತಿ. ಕೋಲಾರ ಜಿಲ್ಲೆ ಮಾಲೂರು ತಾಲೂಕು ಹಳೇಪಾಳ್ಯ ಬಳಿ ಈ ಘಟನೆ ನಡೆದಿತ್ತು. ಅಧಿಕಾರಿಗಳು ಕಲ್ಲುಗಣಿಗಾರಿಕೆ ವೇಳೆ ಕಲ್ಲು ಬಂಡೆ ಬಿದ್ದು ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿ 2ನೇ ದಿನ ಬೃಹತ್ ಬಂಡೆ ತೆರವು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಹಿಟಾಚಿ ಮೇಲೆ ಬಿದ್ದಿದ್ದ ಕಲ್ಲು ಬಂಡೆ ಅಡಿ ಸಿಲುಕಿರುವ ಪ್ರವೀಣ್ ದೇಹ ಪತ್ತೆಯಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.



