Latest

ರೋಹನ್ ಬೋಪಣ್ಣ ಅವರಿಗೆ ಚೆಕ್‌ವಿತರಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಇತ್ತೀಚೆಗೆ ನಡೆದ ಏಷ್ಯನ್ ಗೆಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಖ್ಯಾತ ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ ರೋಹಣ್ ಬೋಪಣ್ಣ ಮತ್ತು ಕುಸ್ತಿ ಮಾದರಿಯ ಕುರಾಸ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಬೆಳಗಾವಿಯ ಕ್ರೀಡಾಪಟು
ಮಲ್ಲಪ್ರಭಾ ಜಾದವ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸದಾಶಿವನಗರದ ತಮ್ಮ‌ಕಚೇರಿಯಲ್ಲಿಂದು ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರಿಗೆ ನಗದು ಬಹುಮಾನವನ್ನು ಕ್ರೀಡಾ ಇಲಾಖೆಯಿಂದ ನೀಡಲಾಗುತ್ತಿದೆ. ರೋಹನ್‌ ಬೋಪಣ್ಣ ಅವರಿಗೆ 25 ಲಕ್ಷ ರು. ಹಾಗೂ ಮಲಪ್ರಭ ಜಾದವ್‌ ಅವರಿಗೆ 8 ಲಕ್ಷ ರು. ಚೆಕ್‌ ವಿತರಿಸಲಾಗಿದೆ.
ಮಲಪ್ರಭ ಜಾದವ್ ಅವರು ನಮ್ಮ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಗ್ರಾಂಡ್‌ ಮಾಸ್ಟರ್‌ ಚೆಸ್‌ನಲ್ಲಿ ಮೊದಲ ಸ್ಥಾನ ಪಡೆದ ತೇಜ್ ಕುಮಾರ್‌ ಹಾಗೂ ಸ್ಟ್ಯಾನಿ ಜಿ.ಎ. ಅವರಿಗೆ ೧೦ ಲಕ್ಷ ತಲಾ ನೀಡಲಾಗಿದೆ ಎಂದರು.

ಇಡೀ ರಾಜ್ಯ, ಜಿಲ್ಲೆವಾರು ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಜಿಲ್ಲೆಯಲ್ಲೂ ಮೂಲಸೌಕರ್ಯ, ಸಿಂಥಟಿಕ್‌ ಟ್ರಾಕ್‌ ಹಾಗೂ ಇಂಡೋರ್‌ ಸ್ಟೇಡಿಯಂ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button