Latest

*ಸೂರಜ್ ಪರ ದೂರು ನೀಡಿದ್ದ ವ್ಯಕ್ತಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುತ್ತಿದ್ದಂತೆ ಸಂತ್ರಸ್ತನ ವಿರುದ್ಧವೇ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದ ಸೂರಜ್ ಆಪ್ತ ಇದೀಗ ನಾಪತ್ತೆಯಾಗಿದ್ದಾನೆ.

Home add -Advt

ಸೂರಜ್ ಪರ ನಿಂತು ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದು, ದೂರು ನೀಡಿದ ಬಳಿಕ ಆತ ಎಲ್ಲಿದ್ದಾನೆ ಎಂಬುದು ತಿಳಿಯುತ್ತಿಲ್ಲ. ಯಾರ ಸಂಪರ್ಕಕ್ಕೂ ಸಿಗದೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಪ್ರಕರಣ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಶಿವಕುಮಾರ್ ಸೂರಜ್ ಜೊತೆಗಿದ್ದೇ ಎಂಎಲ್ ಸಿಯನ್ನು ಟ್ರ್ಯಾಪ್ ಮಾಡಿದ್ದನಾ? ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಯುವಕನೊಬ್ಬ ದೂರು ನೀಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸೂರಜ್ ಆಪ್ತ ಶಿವಕುಮಾರ್ ಸಂತ್ರಸ್ತ ಯುವಕನ ವಿರುದ್ಧ ಬೆದರಿಕೆ, ಬ್ಲ್ಯಾಕ್ ಮೇಲ್ ದೂರು ದಾಖಲಿಸಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಆದರೆ ಈಗ ಏಕಾಏಕಿ ನಾಪತ್ತೆಯಾಗಿದ್ದಾನೆ.


Related Articles

Back to top button