ಪೊಲೀಸರ ಮೇಲೆ ಹಲ್ಲೆ: ಇಬ್ಬರ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಬಾಗ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಆಕಾಶ ಚೋಪಡೆ ಮತ್ತು ಮಹೇಶ ಚೌಗಲೆ ಬಂಧಿತರು. ಇವರು ಪೊಲೀಸರಾದ ಎಲ್ ಕೆ ಪಾಟೀಲ್ ಮತ್ತು ರಾಜು ಹನುಮಂತ ಉಪ್ಪಾರಟ್ಟಿ ಪೊಲೀಸ್ ಸಮವಸ್ತ್ರದಲ್ಲಿ ನಿನ್ನೆ ರಾತ್ರಿ ೧೦.೧೫ರಿಂದ ಉದ್ಯಮಬಾಗ ಪೊಲೀಸ್ ಠಾಣೆಯ ಬೀಟ್ ನಂ ೦೧ ಮತ್ತು ೦೨ ನೇದ್ದರಲ್ಲಿ ರಾತ್ರಿ ಗಸ್ತು ಕರ್ತವ್ಯ ಮಾಡುತ್ತಿದ್ದರು.
ಮಧ್ಯ ರಾತ್ರಿ ೨ ಗಂಟೆಯ ಸುಮಾರಿಗೆ ಮಚ್ಚೆಯ ಕಛೇರಿಗಲ್ಲಿ ನಿವಾಸಿಗಳಾದ ಆಕಾಶ ಕೃಷ್ಟಾ ಚೊಪಡೆ (ವಯಸ್ಸು-೨೩ ವರ್ಷ) ಮತ್ತು ಮಹೇಶ ಪರಶುರಾಮ ಚೌಗಲೆ (ವಯಸ್ಸು-೨೬ ವರ್ಷ) ಹೊಂಡಾ ಆಕ್ಟಿವ್ (ನಂ.ಕೆಎ-೨೨/ಇಪಿ-೮೭೫೯) ಮೇಲಿಂದ ಬೆಮ್ಕೋ ಕ್ರಾಸ್ ಹತ್ತಿರ ಚೀರಾಡುತ್ತಾ ಒದರಾಡುತ್ತಾ ಹೊರಟಿದ್ದರು.
ಅವರನ್ನು ನಿಲ್ಲಿಸಿ ಯಾಕೆ ಈ ರೀತಿ ಶಾಂತತಾ ಭಂಗ ಪಡಿಸುತ್ತಿದ್ದೀರಿ ಎಂದು ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ತಿರುಗಿ ಉತ್ತರ ನೀಡಿದ ಆರೋಪಿಗಳು ಪೊಲೀಸರನ್ನೇ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯವಾಗಿ ಬೈದಿದ್ದಾರೆ. ರಾಜು ಹನುಮಂತ ಉಪ್ಪಾರಟ್ಟಿಯ ಬಲಗೈ ತಿರುವಿ ಬಲಗೈ ಮುಂಗೈಗೆ ಒಳಪೆಟ್ಟು ಪಡಿಸಿದ್ದಲ್ಲದೇ ಎಲ್ ಕೆ ಪಾಟೀಲ ಇವರಿಗೂ ಸಹ ಕೈಯಿಂದ ಮುಷ್ಟಿ ಮಾಡಿ ಹೊಡೆದಿದ್ದಲ್ಲದೇ ತಂಟೆ ಬಿಡಿಸಲು ಬಂದ ವಿಜಯಲಕ್ಷ್ಮೀ ಬಾರ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಕೈಯಿಂದ ಹೊಡೆದು ಕಲ್ಲು ಒಗೆದಿದ್ದಾರೆ.
ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: ೯೯/೨೦೧೯ ಕಲಂ ೩೨೩, ೩೨೪, ೩೪೧, ೩೫೩, ೫೦೪ ಸಕ ೩೪ ಐಪಿಸಿ) ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಯಿತು, ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ