ವಿದ್ಯಾಭಾರತಿ ರಾಜ್ಯಾಧ್ಯಕ್ಷರಾಗಿ ಪರಮೇಶ್ವರ ಹೆಗಡೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ ಹೆಗಡೆ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿದ್ಯಾಭಾರತಿಯ 2 ದಿನಗಳ ಸರ್ವಸಾಧಾರಣ ಸಭೆ ಬೆಳಗಾವಿಯ ಸಂತಮೀರಾ ಶಾಲೆಯಲ್ಲಿ ಸೆಪ್ಟಂಬರ್ 8 ಮತ್ತು 9 ರಂದು ನಡೆಯಿತು. ಸಭೆಯಲ್ಲಿ ಪರಮೇಶ್ವರ ಹೆಗಡೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಯ ಮಾಡಲಾಯಿತು.
ಅಖಿಲ ಭಾರತ ಮಟ್ಟದ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿರುವ ವಿದ್ಯಾಭಾರತಿ ರಾಷ್ಟ್ರಾದ್ಯಂತ ಸುಮಾರು 26 ಸಾವಿರ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಕರ್ನಾಟಕದ 15 ಜಿಲ್ಲಾಗಳಲ್ಲಿ 450ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ