ಡೆಂಗ್ಯೂ ಜಾಗೃತಿ ಶಿಬಿರ; ನಿರ್ಗತಿಕ ಮಹಿಳೆಗೆ ಹೊಲಿಗೆ ಯಂತ್ರದ ಕೊಡುಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯರ ದಿನಾಚರಣೆ ನಿಮಿತ್ತ ನಿಯತಿ ಫೌಂಡೇಶನ್ ಹಾಗೂ ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಡೆಂಗ್ಯೂ ಜಾಗೃತಿ ಶಿಬಿರ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಔಷಧಿ ವಿತರಣೆ ಮಾಡಲಾಯಿತು.
ದೀಪ ಬೆಳಗಿಸಿ ಪೂಜೆ ಸಲ್ಲಿಸಿದ ನಂತರ, ನಿಯತಿ ಫೌಂಡೇಶನ್ ಚೇರಮನ್ ಡಾ. ಸೋನಾಲಿ ಸರ್ನೋಬತ್, ಸಾಮಾಜಿಕ ಜವಾಬ್ದಾರಿಯ ಕುರಿತು ಮಾತನಾಡಿದರು. ಡಾ.ಸುಧೀರ್ ಬಿ.ಕೆ ಅವರು ಡೆಂಗ್ಯೂ ತಡೆಗಟ್ಟುವ ಬಗ್ಗೆ ಮಾತನಾಡಿದರು.
ಇದೇ ವೇಳೆ, ಮಹಿಳಾ ಸಬಲೀಕರಣದ ಸಂಕೇತವಾಗಿ ನಿಯತಿ ಫೌಂಡೇಶನ್‌ನಿಂದ ಮಂಗಲ್ ಪಾಟೀಲ್ ಅವರಿಗೆ ಡಾ. ಸೋನಾಲಿ ಸರ್ನೋಬತ್ ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಶಾಹುನಗರದ ನಿವಾಸಿಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳಿಗೆ ಡೆಂಗೆ ಹನಿ ಹಾಕಲಾಯಿತು. ದೀಪಾಲಿ ಮಾಲಕರಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು.
ಡಾ.ಸುಧೀರ ಬಿ.ಕೆ., ಯುವಪರಿವರ್ತನ ಸಂಯೋಜಕ ಪ್ರವೀಣ ಸುಳಗೇಕರ, ಮಾಜಿ ಸೇವಾ ಯೋಧ ಸಿದ್ಧಪ್ಪ ಹಿಂಗ್ಮಿರೆ, ಮಂಗಲ ಪಾಟೀಲ, ಗೀತಾಂಜಲಿ ಚೌಗುಲೆ, ದೀಪಾಲಿ ಮಲಕಾರಿ, ಕಾಂಚನ್ ಚೌಗುಲೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ