ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಳೆಗಾಲದಲ್ಲಿ ಪೊಲೀಸ್ ಸಿಬ್ಬಂದಿಗೆ ಸುಗಮವಾಗಿ ಕರ್ತವ್ಯ ನಿರ್ವಹಿಸಲು ಹಾಗೂ ಮಳೆಯಿಂದ ಪಾರಾಗಲು ಬೆಳಗಾವಿ ನಗರ ಪೊಲೀಸ್ ಸಿಬ್ಬಂದಿಗೆ ರೇನ್ ಕೋಟ್ಗಳನ್ನು ವಿತರಿಸಲಾಯಿತು.
ಇಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಡಿನ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರೇನ್ಕೋಟ್ಗಳನ್ನು ವಿತರಿಸಿಲಾಯಿತು.
ಮಳೆಗಾಲದಲ್ಲಿ ಬಂದೋಬಸ್ತ್ ಕೈಗೊಳ್ಳುವ ವೇಳೆ ಹಾಗೂ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಎಲ್ಲಾ ಸಿಬ್ಬಂದಿಗೆ ಅನುಕೂಲವಾಗಲು ಒಟ್ಟು 900 ರೇನ್ಕೋಟ್ಗಳನ್ನು ಖರೀದಿಸಲಾಗಿದ್ದು, ಅದರಂತೆ ಎಲ್ಲಾ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ ಈ ರೇನ್ಕೋಟ್ಗಳಿಂದ ರಾತ್ರಿ ವೇಳೆ ಹೆಚ್ಚಿನ ಗೋಚರತೆ ಉಂಟಾಗುವುದರಿಂದ ಅಪಘಾತ ಸಂಭವಿಸುವದನ್ನು ತಡೆಯಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ