Belagavi NewsBelgaum NewsKannada NewsKarnataka News

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ಬೆಳಗಾವಿ ಗ್ರಾಮೀ‌ಣ ಕ್ಷೇತ್ರದ ನ್ಯೂ ವೈಭವ್ ನಗರದ ನೂತನ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆಯನ್ನು‌ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೌಸರ್ ಜಹಾನ್ ಸೈಯದ್, ಸದಸ್ಯರಾದ ಫಕೀರವ್ವ ಬೆಳಗಾವಿ, ಸುವರ್ಣ ಲಕ್ಕಣ್ಣವರ, ಅರ್ಚನಾ ಪಠಾಣಿ, ಅಯೂಬ್ ಖಾನ್ ಪಠಾಣ, ಬಂಡೆ ನವಾಜ್ ಸೈಯದ್, ಷರೀಫ್ ಸನದಿ, ರಂಜಾನ್ ಮನಿಯಾರ‌ ಮುಂತಾದವರು ಉಪಸ್ಥಿತರಿದ್ದರು.

​ ನಂತರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್ ಗ್ರಾಮದ ರಜಾಕ್ ಕಾಲೋನಿಯ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ಕೈಗೊಂಡು ಕಾಮಗಾರಿಗಳಿಗೆ​ ಸಚಿವರು ಚಾಲನೆ ನೀಡಿದರು.

ಈ ಸಮಯದಲ್ಲಿ ಖತಾಲ್ ಮುಜಾವರ್, ಯೂನುಸ್ ಕಾಕತಿ, ಖಲೀಂ ಮುಲ್ಲಾ ಹಾಗೂ ಜಮಾತ್ ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button