ಬೆಂಗಳೂರಿನ ಒಂದೇ ಕುಟುಂಬದ ಐವರು ಸಜೀವ ದಹನ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ತಿರುಪತಿಯಿಂದ ವಾಪಸ್ಸಾಗುವಾಗ ಕಾರಿಗೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ.
ಬೆಂಗಳೂರಿನ 6 ಜನ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ದೇವರ ದರ್ಶನ ಪಡೆದು ವಾಪಸ್ ಬರುವ ವೇಳೆ ದುರ್ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಮಗುಚಿ ಬಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದವರು ಹೊರಗೆ ಬರಲಾಗದೆ ಐವರು ಸಜೀವವಾಗಿ ಬೆಂದು ಹೋದರು. ಓರ್ವ ಮಾತ್ರ ಬದುಕುಳಿದಿದ್ದಾನೆ.
ಸಾವಿಗೀಡಾದವರನ್ನು ಜಾಹ್ನವಿ, ಕಲಾ, ರಾಮ್, ಸಾಯಿ ಆಶ್ರಿತ್, ಪವನ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಚಿತ್ತಾಪುರ ಬಳಿ ಘಟನೆ ನಡೆದಿದೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರೂ ಅಷ್ಟರಲ್ಲಾಗಲೇ ಅದರಲ್ಲಿದ್ದವರೆಲ್ಲ ಜೀವಕಳೆದುಕೊಂಡಿದ್ದರು.
ಕಾನೂನು ಸಲಹೆ ಪಡೆದು ಹೊಸ ನಿಯಮ -ಅಲ್ಲಿಯವರೆಗೂ ಹಳೆಯ ದಂಡ ಅನ್ವಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ