Kannada NewsKarnataka NewsLatest

*ಭರ್ಜರಿ ಪಾರ್ಟಿ ಮಾಡಿ ಸ್ಪಿರೀಟ್ ಸೇವಿಸಿದ್ದ ನಾಲ್ವರು ಯುವಕರು: ಅಸ್ವಸ್ಥಗೊಂಡು ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಭರ್ಜರಿ ಎಣ್ಣೆ ಪಾರ್ಟಿ ಮಾಡಿ ಸ್ಪಿರೀಟ್ ಸೇವಿಸಿದ್ದ ನಾಲ್ವರು ಸ್ನೇಹಿತರಲ್ಲಿ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕೂಕನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಕೂಕನಳ್ಳಿಯಲ್ಲಿ ಪಾರ್ಟಿ ಮಾಡಿದ್ದ ನಾಲ್ವರು ಯುವಕರು ಸ್ಪಿರೀಟ್ ಸೇವಿಸಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

Home add -Advt

ನಾಲ್ವರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಯುವಕ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪಿದ್ದಾರೆ.

ರಮೇಶ್ ಹೊಸಹಳ್ಳಿ (24) ಹಾಗೂ ಅಮರಯ್ಯ ಹಿರೇಮಠ ಮೃತ ದುರ್ದೈವಿಗಳು. ಇನ್ನೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button