Belagavi NewsBelgaum NewsCrimeKannada NewsKarnataka NewsNationalPolitics

*ಎಪಿಎಂಸಿ ಪೊಲೀಸರಿಂದ ಬೈಕ್ ಕಳ್ಳರ ಬಂಧನ: 5 ಬೈಕ್ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೈಕ್ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ಸೈಫಅಲಿ ಶೇರಅಲಿ ನಾಗಾರ್ಜೀ (25), ನೇಹಾನ @ ಅನೀಶ ಮೂಶೀನ ಮುಜಾವರ (18) ಎಂಬ ಕಳ್ಳರನ್ನು ಬಂಧಿಸಿದ್ದಾರೆ.

Home add -Advt

ಕಳ್ಳರಿಂದ ವಿವಿಧ ಕಂಪನಿಯ 1,25,000 ರೂ. ಬೆಲೆಯ ಐದು ಬೈಕ್ ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

ಆರೋಪಿಗಳನ್ನು ಪತ್ತೆಮಾಡಿದ ಪಿಐ ಯು.ಎಸ್.ಅವಟಿ, ಪಿಎಸ್ಐ  ಎಸ್ ಆರ್ ಮುತ್ತತ್ತಿ, ಎಎಸ್ಐ ಸಿಬ್ಬಂದಿಲಾದ ಎಮ್. ಎ. ಪಾಟೀಲ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಗೋವಿಂದಪ್ಪ ಪೂಜಾರ, ರಫೀಕ ಮುಜಾವರ, ರಮೇಶ ಪಾಟೀಲ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ರಮೇಶ ಅಕ್ಕಿ ಮತ್ತು ಮಹದೇವ ಇವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

 

Related Articles

Back to top button