Belagavi NewsBelgaum NewsKannada NewsKarnataka News

*ಭ್ರೂಣಹತ್ಯೆ ಮಾಡಿ ಜೈಲು ಸೇರಿ ಬಿಡುಗಡೆಯಾದ ನಕಲಿ ವೈದ್ಯನಿಗೆ ಭರ್ಜರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಣದ ಆಸೆಗಾಗಿ ಭ್ರೂಣಹತ್ಯೆ ಹಾಗೂ ಶಿಶು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಕಿತ್ತೂರಿನ ನಕಲಿ ವೈದ್ಯ ಜೈಲಿನಿಂದ ಬಿಡುಗಡೆಯಾಗಿದ್ದೇ ತಡ, ಆತನ ಬೆಂಬಲಿಗರು ಆತನಿಗೆ ಹೂಮಾಲೆ ಹಾಕಿ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

Home add -Advt

ಕಿತ್ತೂರು ಪಟ್ಟಣದ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಎಂಬ ಆರೋಪಿಗೆ ಇಂತಹದೊಂದು ಅದ್ಧೂರಿ ಸ್ವಾಗತ ನೀಡಲಾಗಿದ್ದು, ಈ ಪ್ರಸಂಗ ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ಇಲ್ಲಿನ ರಾಮತೀರ್ಥ ನಗರದಲ್ಲಿ ಮಕ್ಕಳ ರಕ್ಷಣಾ ಘಟಕದ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆಯಿಂದ ಶಿಶು ಮಾರಾಟದ ಜಾಲ ಇರುವುದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಇದೇ ಕಿತ್ತೂರಿನ ನಕಲಿ ವೈದ್ಯ ಅಬ್ದುಲ್ ಲಾಡಖಾನ್ 60 ಸಾವಿರಕ್ಕೆ ಹಸುಗೂಸನ್ನು ಮಾರಾಟ ಮಾಡಿದ್ದ. ಆದರೆ, ಈತನಿಂದ ಮಗು ಪಡೆದಿದ್ದ ಮಹಿಳೆ ಮತ್ತೆ ಆ ಮಗುವನ್ನು 1.40 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಮಾಳಮಾರುತಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು.

Related Articles

Back to top button