ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಹಿಂಬದಿ ಸವಾರನಿಗೆ ಪರಿಹಾರ ಎಷ್ಟು ಗೊತ್ತೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- 2018ರ ಜೂನ್ 6ರಂದು ರಾತ್ರಿ ಸುಮಾರು ೨ ಘಂಟೆಗೆ ರಾಹುಲ ಹೂಗಾರ ಎಂಬ ವ್ಯಕ್ತಿಯು ಮೋಟರ್ ಸೈಕಲ್ (ನಂ. ಕೆಎ-೨೮-ಇಪಿ೧೦೬೦) ಮೇಲೆ ಹಿಂಬದಿ ಸವಾರನಾಗಿ ಬಾಗಲಕೋಟೆ ಮಾರ್ಗವಾಗಿ ಬೈಲಹೊಂಗಲಕ್ಕೆ ಬರುವಾಗ ಸಂಶಿ ಕ್ರಾಸ್ ಹತ್ತಿರ ಮೋಟರ್ ಸೈಕಲ್ ಸವಾರನ ಅಜಾಗರೂಕತೆಯಿಂದ ಕೆಳಗೆ ಬಿದ್ದು ತನ್ನ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ಬಾಗಲಕೋಟ ಜಿಲ್ಲೆಯ ಕಲಾದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮೋಟಾರ್ ಸೈಕಲ್ ಸವಾರನ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಪಘಾತದ ರಬಸಕ್ಕೆ ಹಿಂಬದಿ ಸವಾರನು ಸುಮಾರು 5 ತಿಂಗಳಿಗಿಂತಲೂ ಹೆಚ್ಚು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಗಾಯಾಳುವಿನ ತಂದೆ ಪರಿಹಾರ ಕುರಿತು ಮಾನ್ಯ 4 ನೇ ಜಿಲ್ಲಾ ನ್ಯಾಯಾಲಯ ಬೆಳಗಾವಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ನ್ಯಾಯಾಲಯ ಅರ್ಜಿದಾರರ ಪರವಾಗಿ ಮೂರು ಜನರ ಸಾಕ್ಷಿ ವಿಚಾರಣೆ ಮಾಡಿ ಎದುರುದಾರನಿಗೆ (ನಂ. 2) ನ್ಯಾಷನಲ್ ಇನ್ಸುರನ್ಸ್ ಕಂಪನಿಯವರು 77,13,449 ರೂ. ಹಾಗೂ ಶೇ.6ರಷ್ಟು ಬಡ್ಡಿ ಸೇರಿಸಿ 30 ದಿನದೊಳಗೆ ನೀಡುವಂತೆ ಆದೇಶಿಸಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ಬಸವರಾಜ ಎನ್ ಮೈಗೂರ ವಾದ ಮಂಡಿಸಿದ್ದರು.
ಅಂತೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ