Kannada NewsKarnataka News

ಬೆಳಗಾವಿಯಲ್ಲಿ ಬಿತ್ತು 15 ಸಾವಿರ ರೂ ದಂಡ

ಬೆಳಗಾವಿಯಲ್ಲಿ ಬಿತ್ತು 15 ಸಾವಿರ ರೂ ದಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೊಸ ಸಂಚಾರ ನಿಯಮ ಜಾರಿಗೆ ಬಂದ ನಂತರ ರಾಷ್ಟ್ರದ ವಿವಿಧೆಡೆ ಭಾರಿ ಪ್ರಮಾಣದಲ್ಲಿ ವಾಹನ ಸವಾರರು ದಂಡ ತೆತ್ತುತ್ತಿರುವುದು ಸುದ್ದಿಯಾಗುತ್ತಿದೆ.

ಮಂಗಳವಾರ ಬೆಳಗಾವಿಯಲ್ಲೂ ಕುಡಿದು ಚಾಲನೆ ಮಾಡಿದ ವ್ಯಕ್ತಿಯೊರ್ವನಿಗೆ ದೊಡ್ಡ ಮೊತ್ತದ ದಂಡ ಬಿದ್ದಿದೆ. ದಯಾನಂದ ಶಿವಾಜಿ ದೋತ್ರೆ ಎನ್ನುವವರು ಕುಡಿದು ವಾಹನ ಚಾಲನೆ ಮಾಡುತ್ತಿರುವಾಗ ಮಾಳಮಾರುತಿ ಠಾಣೆ ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯ ಆರೋಪಿಗೆ 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಬೆಳಗಾವಿಯಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲು.

ದಂಡದ ಪ್ರಮಾಣ ಕಡಿಮೆ ಮಾಡುವುದಾಗಿ ರಾಜ್ಯಸರಕಾರ ಹೇಳುತ್ತಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ. ಹಾಗಾಗಿ ಹೊಸ ನಿಯಮದ ಪ್ರಕಾರ ಈ ದಂಡ ವಿಧಿಸಲಾಗಿದೆ.

 

ಕಾನೂನು ಸಲಹೆ ಪಡೆದು ಹೊಸ ನಿಯಮ -ಅಲ್ಲಿಯವರೆಗೂ ಹಳೆಯ ದಂಡ ಅನ್ವಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button