ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಮನ ನಗರನಲ್ಲಿ ಡ್ರೈನೇಜ್ ನೀರು ರಸ್ತೆಗಳ ಮೇಲೆ ತುಂಬಿಕೊಂಡು ಮನೆಗಳಿಗೆ ನುಗ್ಗುತ್ತಿದ್ದು, ಶವ ಸಾಗಾಟಕ್ಕೂ ಜನ ಪರದಾಡಿದ ಘಟನೆ ನಡೆದಿದೆ.
ಬೆಳಗಾವಿಯ ಅಮನ ನಗರದಲ್ಲಿ ಡ್ರೈನೇಜ್ ಓವರ್ ಫ್ಲೋ ಆಗಿ ನೀರು ಬೇರೆ ಕಡೆ ಹೋಗಲು ವ್ಯವಸ್ಥೆ ಇಲ್ಲದೆ ಜನರು ಪರದಾಡುವ ಪರಿಸ್ಥಿಯಾಗಿದೆ. ಕಳೆದೆ ರಾತ್ರಿ ಮನೆಗಳಿಗೆ ನೀರು ತುಂಬಿದ ಪರಿಣಾಮ ಮನೆಯಲ್ಲಿ ಜಾರಿ ಬಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ ಬೆಳಗ್ಗೆ ಅವರ ಅಂತ್ಯಕ್ರಿಯೆಗೆ ಶವ ಸಾಗಟ ಮಾಡಲು ಜನ ಪರದಾಡಿದ್ದಾರೆ. ಮೋಣಕಾಲಿನವರೆಗೆ ತುಂಬಿಕೊಂಡ ನೀರಿನಲ್ಲೇ ಸಾಗಿ ಅಂಜುಮನ್ ಸಂಸ್ಥೆಯ ಸಹಾಯದಿಂದ ಅಂತ್ಯಸಂಸ್ಕಾರಕ್ಕೆ ಶವ ಸಾಗಟ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ