Belagavi NewsBelgaum NewsKannada NewsKarnataka NewsLatestNational

ಸಂಸತ್ತಿನಲ್ಲಿ ಬೆಳಗಾವಿ ಪ್ರವಾಹ ಪರಿಸ್ಥಿತಿ ತೆರೆದಿಟ್ಟ ಈರಣ್ಣ ಕಡಾಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಸತ್ ಅಧಿವೇಶನದ ಗಮನ ಸೆಳೆಯುವ ಪ್ರಸ್ತಾಪದ ವೇಳೆಯಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಆಗಿರುವ ಅತಿವೃಷ್ಟಿ ಪರಿಣಾಮಗಳ ಕುರಿತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದರು.

ಮಹಾರಾಷ್ಟçದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ತುಂಬಿಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯ ಜನ ಜೀವನ ತುಂಬಾ ಅಸ್ವಸ್ಥಗೊಂಡಿದೆ. ಮಹಾರಾಷ್ಟçದ ರಾಜಾಪೂರ ಮತ್ತು ಕೋಯ್ನಾ ಜಲಾಶಯಗಳು ಭರ್ತಿಯಾಗಿದ್ದು, ಸದರಿ ಜಲಾಶಯಗಳಿಂದ ಸುಮಾರು ೩ ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ಅದೇ ರೀತಿ ಘಟಪ್ರಭಾ ನದಿಗೂ ಕೂಡಾ ೮೦ ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದು ಬರುತ್ತಿರುವ ಪರಿಣಾಮವಾಗಿ ಈ ಎರಡು ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 

   ಈ ಎರಡು ನದಿಗಳ ಪ್ರವಾಹದ ಹಿನ್ನಲೆಯಲ್ಲಿ ೨೩೨ ಗ್ರಾಮಗಳು ಜಲಾವೃತಗೊಂಡಿವೆ, ೪೪ ಸೇತುವೆಗಳು ಮುಳುಗಡೆಯಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ೮೦೦ ಕ್ಕಿಂತ ಹೆಚ್ಚು ಕುಟುಂಬಗಳ ೪೦೦೦ ಕ್ಕಿಂತ ಹೆಚ್ಚು ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು ೫ ಜನರ ಜೀವಹಾನಿಯಾಗಿದ್ದು, ಹತ್ತಾರು ದನ ಕರುಗಳು ಸಾವನಪ್ಪಿವೆ. ೪೬೭೦೦ ಹೆಕ್ಟೇರಗಿಂತ ಹೆಚ್ಚು ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿಯಾಗಿದೆ. ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ.

 ಎರಡು ನದಿಗಳ ಮಹಾಪೂರದಲ್ಲಿ ಮೊಸಳೆ, ಬಾರಿ ಗಾತ್ರದ ಮೀನುಗಳು, ಹಾವು-ಏಡಿ ಈ ರೀತಿ ಜಲಚರ ಜೀವಿಗಳು ಹೊರಬರುತ್ತಿವೆ. ಇದರಿಂದ ಜನತೆ ಗಾಬರಿಗೊಂಡಿದ್ದಾರೆ. ಜನರು ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿದ್ದು, ಇದರಿಂದಾಗಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಪ್ರವಾಹ ಕಡಿಮೆಯಾದ ಮೇಲೆ ತಗ್ಗುಗಳಲ್ಲಿ ನಿಲ್ಲುವ ನೀರಿನಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ. ಪ್ರಕೃತಿ ವಿಕೋಪದಿಂದ ಜನರು ಇನ್ನೂ ಹಲವಾರು ಸಮಸ್ಯೆಗಳಿಗೆ ಸಿಲುಕುವ ಆಂತಕ ಎದುರಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ನದಿ ಪಾತ್ರದ ಜನರಿಗೆ ಈ ರೀತಿ ತೊಂದರೆಗಳಾಗುವುದು ಶಾಶ್ವತವಾಗಿ ಹೋಗಿದೆ. ಆದರೆ ಸದರಿ ಜನರ ಸುರಕ್ಷತೆಗಾಗಿ ಮತ್ತು ಸತತವಾಗಿ ಹಾನಿಗೊಳಗಾಗುವುದನ್ನು ತಡೆಗಟ್ಟುವುದಕ್ಕಾಗಿ ಶಾಶ್ವತ ಪರಿಹಾರ ಯೋಜನೆಗಳಿಗೆ ಅಗತ್ಯ ಕ್ರಮಕೈಗೊಳ್ಳಬೇಕಾದ ಕರ್ನಾಟಕ ಸರ್ಕಾರ ಗಂಜಿ ಕೇಂದ್ರಗಳನ್ನು ತೆರೆದು ಕೈ ತೊಳೆದುಕೊಳ್ಳುತ್ತಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾದ ಕರ್ನಾಟಕದ ಜನರ ಸಹಾಯಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಗತ್ಯ ಕ್ರಮಕೈಗೊಳ್ಳಬೇಕಾಗಿ ಮನವಿ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button