
ಪ್ರಗತಿವಾಹಿನಿ ಸುದ್ದಿ: ಶಾಲೆಯ ಶೌಚಾಲಯದಲ್ಲಿ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಕೋತಪಟ್ಟಣಂ ನಲ್ಲಿ ನಡೆದಿದೆ.
ಚೀಮಕುರ್ತಿ ಮಂಡಲದ ನಿವಾಸಿ 16 ವರ್ಷದ ವಿದ್ಯಾರ್ಥಿನಿ ಕೋತಪಟ್ಟಂನ ಕಸ್ತೂರಬಾ ಗಂಧಿ ಬಾಲಿಕಾ ವಿದ್ಯಾಲಯದಲ್ಲಿ ಓದುತ್ತಿದ್ದಳು. ಜೂನ್ 19ರಿಂದ ಶಾಲೆಗೆ ಸೇರಿದ್ದ ಬಾಲಕಿ ಪ್ರತಿದಿನ ಶಾಲೆಗೆ ಬರುತ್ತಿದ್ದಳು.
ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಅಲ್ಲಿಯೇ ಮಗುವಿಗೆ ಜನ್ಮನೀಡಿದ್ದಾಳೆ. ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದೂ ಯಾರಿಗೂ ಗೊತ್ತಿರಲಿಲ್ಲ. ಹಲವು ಗಂಟೆಗಳ ಕಾಲ ಹೆರಿಗೆ ನೋವು ಅನುಭವಿಸಿದ್ದರೂ ಬಾಲಕಿ ಯಾರಿಗೂ ಹೇಳದೇ ಸುಮ್ಮನಿದ್ದಳು. ಶೌಚಾಲಯಕ್ಕೆಂದು ಹೋದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.
ಎಷ್ಟು ಹೊತ್ತಾದರೂ ವಿದ್ಯಾರ್ಥಿನಿ ಶೌಚಾಲಯದಿಂದ ಬಾರದಿದ್ದಾಗ ಸಹಪಾಠಿಗಳು ಶೌಚಾಲಯಕ್ಕೆ ಹೋಗಿ ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕರು ಸ್ಥಳಕ್ಕೆ ಹೋಗಿ ಪರಿಶೀಲಿಸುವಷ್ಟರಲ್ಲಿ ವಿದ್ಯಾರ್ಥಿನಿ ರಕ್ತದ ಮಡುವಲ್ಲಿ ಬಿದ್ದಿದ್ದಳು. ಗಂಭೀರ ಸ್ಥಿತಿ ತಲುಪಿದ್ದ ವಿದ್ಯಾರ್ಥಿನಿಯನ್ನು ಆಸ್ಪತೆಗೆ ದಾಖಲಿಸಲಾಗಿದೆ. ಆದರೆ ಹುಟ್ಟಿದ ಮಗು ಕೆಲವೇ ಸಮಯದಲ್ಲಿ ಮೃತಪಟ್ಟಿದೆ. ವಿದ್ಯಾರ್ಥಿನಿ ಸ್ಥಿತಿಗೆ ಕಾರಣದವನ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.