Kannada NewsKarnataka News

ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಲಾರ್ಡ್ ಮೆಕಾಲೆಯ ಶಿಕ್ಷಣ ಪದ್ಧತಿ ಇಂದಿನ ದಿನಗಳಲ್ಲಿಯೂ ಮುಂದುವರೆಯುತ್ತಿದ್ದು ಇದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಆನಂದಕ್ಕಿಂತ ಪರೀಕ್ಷೆಯ ಭಯವೇ ಹೆಚ್ಚಾಗಿದೆ ಎಂದು ಪ್ರಾ. ಎಮ್.ಎಸ್.ಇಂಚಲ ಹೇಳಿದರು.
 ಸಮೀಪದ   ಗ್ರಾಮದ ಪ್ರೌಢಶಾಲೆಯ ಸಭಾಭವನದಲ್ಲಿ ಗ್ರಾಮದ ಗುರುಬಳಗ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಉಪನ್ಯಾಸಕರಾಗಿ ಮಾತನಾಡಿ,
 ಈಗಿನ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದ್ದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಶಿಕ್ಷಕರು ಸಾಧಕರಾಗಿದ್ದಲ್ಲಿ, ಮಕ್ಕಳಿಗೆ ಅವರು ಒಳ್ಳೆಯ ಸಂಸ್ಕಾರವನ್ನು ನೀಡಬಹುದಾಗಿದೆ ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಗ್ರಾಮದ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿನಿತ್ಯ ನಿಮ್ಮ ಮನೆಯನ್ನು ಹೊರತುಪಡಿಸಿ, ನೀವು ಅತಿ ಹೆಚ್ಚು ಸಮಯ ಕಳೆಯುವ ತಾಣವೆಂದರೆ ಶಾಲೆ.  ಪ್ರತಿ ದಿನ ಕನಿಷ್ಠ ಆರು ಅಥವಾ ಏಳು ಗಂಟೆಗಳ ಕಾಲ ನೀವು ಶಾಲೆಯಲ್ಲಿರುತ್ತೀರಿ.
ನಿಮ್ಮ ಕಲಿಕೆಯ ಹಾಗೂ ವೈಯುಕ್ತಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ನಿಮ್ಮ ಶಾಲಾಜೀವನದ ಅವಧಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಶಾಲೆಯಲ್ಲಿ ಕಳೆಯುವ ಸಮಯವನ್ನು ಕಲಿಕೆಯ ಪ್ರಕ್ರಿಯೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ನಿಮ್ಮ ಪೋಷಕರು ನಿಮ್ಮ ಬಗ್ಗೆ ಇಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳಬೇಕು ಎಂದರು.
     ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದ ಶಾಸಕ ಮಹಾಂತೇಶ ಕೌಜಲಗಿ, ಅತಿಥಿಗಳಾಗಿ ಆಗಮಿಸಿದ್ದ   ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ತಾಪಂ ಸದಸ್ಯ ಜಗದೀಶ್ ಬೂದಿಹಾಳ, ಪ್ರಕಾಶ ಮೂಗಬಸವ ಮಾತನಾಡಿದರು. ಪ್ರಧಾನ ಶಿಕ್ಷಕ ಎ.ಎಸ್.ಪತ್ತಾರ ಅಧ್ಯಕ್ಷತೆವಹಿಸಿದ್ದರು.
 ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಗಜಾನನ ಸೂರ್ಯವಂವಶಿ, ಎಮ್.ಎಸ್. ಜೋತಗನ್ನವರ, ಎಮ್.ಎಮ್.ಅಸುಂಡಿ ಹಾಗೂ ಶಾಲೆಯಲ್ಲಿ ಕಲಿತು ಭಾರತೀಯ ಸೈನ್ಯ ಸೇರಿದ ಸೈನಿಕರನ್ನು ಸತ್ಕರಿಸಲಾಯಿತು.
   ಗ್ರಾಪಂ ಅಧ್ಯಕ್ಷೆ ಪಾರವ್ವ ಮೂಗಬಸವ, ಬಸವ್ವ ದುಗ್ಗಾಣಿ, ಸರೋಜಿನಿ ಬಾಳೇಕುಂದರಗಿ, ಎಸ್.ಕೆ.ಮೆಳ್ಳಿಕೇರಿ, ಮೋಹನ ವಕ್ಕುಂದ, ಮುನೀರ ಶೇಖ, ಮಲ್ಲಪ್ಪ ಯರಡಾಲ, ಮಡಿವಾಳಪ್ಪ ಜಾಧವ, ಬಸವರಾಜ ವಿವೇಕಿ, ಈರಪ್ಪ ಮಾಕಿ, ಮಲ್ಲಿಕಾರ್ಜುನ ಸಂಪಗಾಂವ ವೇದಿಕೆ ಮೇಲಿದ್ದರು.
   ಕಾರ್ಯಕ್ರಮದಲ್ಲಿ  ಶಿಕ್ಷಕರಾದ, ಮಹಾಂತೇಶ ಕಮತಗಿ, ಮಹಾಂತೇಶ ಮಬ್ಬನೂರ, ನಾಗಪ್ಪ ಪೆಂಟೇದ,  ಎಸ್.ಎನ್.ಬುಡಶಟ್ಟಿ, ಕೆ.ಆರ್.ನದಾಫ್,  ಎಮ್.ಬಿ.ಮೂಲಿಮನಿ ಹಾಗೂ ನೂರಾರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಎಮ್ ಬಿ ಸೋಮನಟ್ಟಿ ಸ್ವಾಗತಿಸಿದರು, ಗಜಾನನ ಸೂರ್ಯವಂಶಿ ನಿರೂಪಿಸಿದರು. ಎಸ್.ಎಸ್.ಮಲ್ಲನ್ನವರ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button