LatestNational

*ಮಹತ್ವದ ಸೂಚನೆ: 5 ದಿನಗಳ ಕಾಲ ಆನ್ ಲೈನ್ ಪಾಸ್ ಪೋರ್ಟ್ ಪೋರ್ಟಲ್ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಮುಂದಿನ 5 ದಿನಗಳ ಕಾಲ ಆನ್ ಲೈನ್ ಪಾಸ್ ಪೋರ್ಟ್ ಪೋರ್ಟಲ್ ಸ್ಥಗಿತಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಇಂದು ರಾತ್ರಿ 8 ಗಂಟೆಯಿಂದ ಸೆಪ್ಟೆಂಬರ್ 2ರ ಬೆಳಿಗ್ಗೆ 6 ಗಂಟೆಯವರೆಗೆ ಆನ್ ಲೈನ್ ಪಾಸ್ ಪೋರ್ಟ್ ಪೋರ್ಟಲ್ ಸ್ಥಗಿತಗೊಳ್ಳಲಿದೆ. ಈ ವೇಳೆ ನೀಡಲಾಗಿರುವ ಎಲ್ಲಾ ಅಪಾಯಿಂಟ್ ಮೆಂಟ್ ಗಳನ್ನು ಮುಂದೂಡಲಾಗಿದೆ.

ನಿರ್ವಹಣೆ ಪ್ರಕ್ರಿಯೆಯಿಂದಾಗಿ ಪಾಸ್ ಪೋರ್ಟ್ ಪೋರ್ಟಲ್ ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಸಂದರ್ಶನಕ್ಕೆ ಅವಕಾಶವಿರುವುದಿಲ್ಲ. ಈಗಗಲೇ ಕಾಯ್ದಿರಿಸಿದ ಸಂದರ್ಶನಗಳು ಮರುಹೊಂದಿಕೆಯಾಗಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button