Film & EntertainmentKarnataka News

*ಬಳ್ಳಾರಿ ಸೆಂಟ್ರಲ್ ಜೈಲು ಸೇರಿದ ನಟ ದರ್ಶನ್; ಹೊಸ ವಿಚಾರಣಾಧೀನ ಕೈದಿ ನಂಬರ್ ನೀಡಿದ ಜೈಲಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Home add -Advt

ಕೊಲೆ ಆರೋಪಿ ದರ್ಶನ್ ನನ್ನು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಜೈಲಿಗೆ ಕರೆತಂದ ದರ್ಶನ್ ವಿಳಾಸ, ಹೆಸರು, ಪ್ರಕರಣದ ಮಾಹಿತಿ ದಾಖಲಿಸಿಕೊಂಡ ಜೈಲಧಿಕಾರಿಗಳು ಹೊಸ ಕೈದಿ ನಂಬರ್ ನೀಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಗೆ ವಿಚಾರಣಾಧೀನ ಕೈದಿ ನಂಬರ್ 6106 ಸಂಖ್ಯೆ ನೀಡಲಾಗಿತ್ತು. ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್ ಗೆ ವಿಚಾರಣಾಧೀನ ಕೈದಿ ನಂಬರ್ 511 ನಂಬರ್ ನೀಡಲಾಗಿದೆ.

Related Articles

Back to top button