ಪ್ರಗತಿವಾಹಿನಿ ಸುದ್ದಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದ್ದು, ಪುರುಷರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಹೊಕಾಟೊ ಹೊಟೊಝ ಸೆಮಾ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ನಿನ್ನೆ ತಡ ರಾತ್ರಿ ನಡೆದ ಪಂದ್ಯದಲ್ಲಿ ಹೊಕಾಟೋ ಅವರು 14.65 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು, ಇದು ಅವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. ಇನ್ನು ಇರಾನ್‌ನ ಯಾಸಿನ್ ಖೋಸ್ರಾವಿ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ 15.96 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರು.
ಬ್ರೆಜಿಲ್‌ನ ಥಿಯಾಗೊ ಪೌಲಿನೋ ಡಾಸ್ ಸ್ಯಾಂಟೋಸ್ ಅವರು 15.06 ಮೀ ಎಸೆಯುವ ಮೂಲಕ ಬೆಳ್ಳಿ ಪಡೆದರು. ಆದಾಗ್ಯೂ ಮತ್ತೊಬ್ಬ ಭಾರತೀಯ ಅಥೀಟ್ ಸೋಮನ್ ರಾಣಾ ಅವರು 14.07 ಮೀ ನಷ್ಟು ದೂರ ಎಸೆಯುವ ಮೂಲಕ ಐದನೇ ಸ್ಥಾನವನ್ನು ಪಡೆದರು.
ಭಾರತವು ಪ್ರಸ್ತುತ 27 ಪದಕಗಳೊಂದಿಗೆ ಒಟ್ಟಾರೆ ಪದಕ ಪಟ್ಟಿಯಲ್ಲಿ 17 ನೇ ಸ್ಥಾನದಲ್ಲಿದೆ, ಇದರಲ್ಲಿ ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 12 ಕಂಚು ಸೇರಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ