Sports

*ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಕಪ್ ಗೆದ್ದ ಟೀಂ ಇಂಡಿಯಾ*

ಪ್ರಗತಿವಾಹಿನಿ ಸುದ್ದಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ರ ಫೈನಲ್‌ನಲ್ಲಿ ಚೀನಾವನ್ನು ಸೋಲಿಸವ ಮೂಲಕ ಭಾರತ ಐದನೇ ಬಾರಿಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ.

ಮೊದಲ ಮೂರು ಕ್ವಾರ್ಟರ್​ಗಳು ಗೋಲು ರಹಿತವಾಗಿ ಉಳಿದ ನಂತರ, ಟೀಮ್ ಇಂಡಿಯಾ ಅಂತಿಮವಾಗಿ ನಾಲ್ಕನೇ ಮತ್ತು ಕೊನೆಯ ಕ್ವಾರ್ಟರ್​ ನಲ್ಲಿ ಅದ್ಭುತ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. ಭಾರತದ ಪರ ಜುಗ್ರಾಜ್ ಪಂದ್ಯದ ಏಕೈಕ ಗೋಲು ದಾಖಲಿಸಿದರು. ಅಂದಹಾಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿರುವುದು ಇದು ದಾಖಲೆಯ ಐದನೇ ಬಾರಿಗೆ ಅನ್ನೋದು ವಿಶೇಷ.

ಮೊದಲ ಕ್ವಾರ್ಟರ್​ ನಲ್ಲಿ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿತು, ಆದರೆ ಎರಡೂ ಬಾರಿ ಚೀನಾದ ಗೋಲ್‌ಕೀಪರ್ ತನ್ನ ಗೋಲ್ ಪೋಸ್ಟ್ ಅನ್ನು ಸುರಕ್ಷಿತವಾಗಿರಿಸಿಕೊಂಡರು. ಕೊನೆಯ ಕ್ಷಣಗಳಲ್ಲಿ ಚೀನಾದ ಆಟಗಾರರು ಚೆಂಡನ್ನು ಹೆಚ್ಚು ಹೊತ್ತು ತಮ್ಮ ಹಿಡಿತದಲ್ಲಿಟ್ಟುಕೊಂಡರೂ ಭಾರತದ ರಕ್ಷಣಾ ವಿಭಾಗವೂ ಅಮೋಘವಾಗಿತ್ತು. ಇದಕ್ಕೂ ಮುನ್ನ ಭಾರತ ಮತ್ತು ಚೀನಾ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 3-0 ಅಂತರದ ಸುಲಭ ಜಯ ದಾಖಲಿಸಿತ್ತು.

Home add -Advt

Related Articles

Back to top button