LatestNational

*ತಿರುಪತಿ ಲಡ್ಡುವಿನಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು ಬಳಕೆ*

ಪ್ರಗತಿವಾಹಿನಿ ಸುದ್ದಿ: ಭಾರತದ ಪ್ರಸಿದ್ದ ದೇವಸ್ಥಾನವಾದ ತಿರುಪತಿ ತಿರುಮಲ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡಿಗಳಲ್ಲಿ  ಕಲಬೆರಕೆ ಇರುವುದು ದೃಢಪಟ್ಟಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರಸಾದದಲ್ಲಿ ಕಲಬೆರಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಜಾನುವಾರು, ಆಹಾರ ವಿಶ್ಲೇಷಣೆ ಮತ್ತು ಅಧ್ಯಯನ ಕೇಂದ್ರ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇದ್ದಿದ್ದನ್ನು ಖಚಿತಪಡಿಸಿದೆ.

ಜುಲೈ 8 ರಂದು ಲಡ್ಡುವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ NDDB CALF ಲ್ಯಾಬ್ ವರದಿ ನೀಡಿದ್ದು, ಇದರ ಪ್ರಕಾರ, ಸೋಯಾಬೀನ್, ಆಲಿವ್, ಗೋಧಿ, ಜೋಳ, ಹತ್ತಿ ಬೀಜಗಳು, ಮೀನಿನ ಎಣ್ಣೆ ಪ್ರಾಣಿಗಳ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಲಡ್ಡುಗಳಲ್ಲಿ ಬಳಸಲಾಗುತ್ತದೆ.

ಟಿಡಿಪಿ ಹಿರಿಯ ನಾಯಕ ಆನಂ ವೆಂಕಟರಮಣ ರೆಡ್ಡಿ ಅವರು ಲ್ಯಾಬ್ ವರದಿಯನ್ನು ಬಹಿರಂಗಪಡಿಸಿದ್ದಾರೆ. ಕಲಬೆರಕೆ ತುಪ್ಪದ ಬಗ್ಗೆ ಗಂಭೀರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button