
ಪ್ರಗತಿವಾಹಿನಿ ಸುದ್ದಿ: ಡಿಜೆ ಹಾಡಿಗೆ ಯುವಕರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಬಾಬು (42) ಮೃತ ದುರ್ದೈವಿ. ಗ್ರಾಮದಲ್ಲಿ ಗೌರು ವಿಸರ್ಜನೆ ಅಂಗವಾಗಿ ಕಲ್ಯಾಣ ಬಸವೇಶ್ವರ ಉತ್ಸವ ಹಮ್ಮಿಕೊಳ್ಳಲಾಗಿತ್ತು. ದೇವರ ಉತ್ಸವದ ವೇಳೆ ಡಿಜೆ ಸೌಂಡ್ ಗೆ ಯುವಕರೊಂದಿಗೆ ಡಾನ್ಸ್ ಮಾಡುತ್ತಿದ್ದ.
ಕುಣಿದು ಕುಪ್ಪಳಿಸುತ್ತಿದ್ದ ಬಾಬು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದ ಸಾವನ್ನಪ್ಪಿದಾನೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ