*ಮ್ಯಾಗ್ನಂಟಫ್ ಇಂಡಿಯಾ ಪ್ರೈವೇಟ್ ಲಿ. ಕಾರ್ಖಾನೆಗೆ ನಾಲ್ಕು ವರ್ಷದ ಸಂಭ್ರಮ: ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ “ಮ್ಯಾಗ್ನಂಟಫ್ ಇಂಡಿಯಾ ಪ್ರೈವೇಟ್ ಲಿ.” ಕಾರ್ಖಾನೆಯ 04 ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜ್ಯೋತಿಪ್ರಸಾದ ಹಾಗೂ ಪ್ರಿಯಾ ಜೊಲ್ಲೆ ಯವರು ಉದ್ಘಾಟಿಸಿದರು.
ಇದಕ್ಕೂ ಮೊದಲು ಕಾರ್ಖಾನೆ ಸಿಬ್ಬಂದಿಯ ಆರೋಗ್ಯದ ಹಿತ ದೃಷ್ಟಿಯಿಂದ ನೂತನ ಕ್ಯಾಂಟಿನ್ ಉದ್ಘಾಟಿಸಿದರು.
ಶಾಸಕರಾದ ಶಶಿಕಲಾ ಜೊಲ್ಲೆ ಮಾತನಾಡಿ, ನಮ್ಮ ಸಂಸ್ಥೆಯ ಸಿಬ್ಬಂದಿಗಳು ಒತ್ತಡದ ಬದುಕಿನಿಂದ ಹೊರಬರುವ ನಿಟ್ಟಿನಲ್ಲಿ ಹೋಂ ಮಿನಿಸ್ಟರ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮನರಂಜನೆ ನೀಡಲಾಯಿತು ಎಂದರು. ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜೊಲ್ಲೆಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನಾವು ಪ್ರಾರಂಭಿಸಿದ ಈ ಕಾರ್ಖಾನೆ, ಸುಮಾರು 250 ಕ್ಕೂ ಅಧಿಕ ಯುವಕರ ಬಾಳಿಗೆ ಆಶಾಕಿರಣವಾಗಿದೆ ಎಂಬ ಸಂತೃಪ್ತಿ ನಮಗಿದೆ. ನಾಲ್ಕು ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಕಾರ್ಖಾನೆಯ ಯಶಸ್ವಿ ಮುನ್ನಡೆಗೆ ಕಾರಣರಾದ ಸರ್ವ ಸಿಬ್ಬಂದಿ,ಆಡಳಿತ ವರ್ಗಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಶ್ರೀ ವಿಶ್ವನಾಥ ಕಮತೆ, ತಾತ್ಯಾ ಪಾಟೀಲ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಕಲಾಲ,ಇವೆಂಟ್ ಮ್ಯಾನೇಜರ್ ವಿಜಯ ರಾವುತ್, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ