Belagavi NewsBelgaum NewsKannada NewsKarnataka NewsLatest

*ಶ್ರೀಗಂಧ ಕಳ್ಳನ ಬಂಧನ*

ನಾಗರಗಾಳಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ನಾಗರಗಾಳಿ ವಲಯದ ಅರಣ್ಯಾಧಿಕಾರಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಡೆಸಿದ ಮಿಂಚಿನ ದಾಳಿಯಲ್ಲಿ ಶ್ರೀಗಂಧವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲುಸಮೇತ ಹಿಡಿದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ಮಂಗಳವಾರ ಜರುಗಿದೆ.

ತಾಲೂಕಿನ ನಾಗರಗಾಳಿ ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆದಿದ್ದ ಶ್ರೀಗಂಧದ ಗಿಡವೊಂದನ್ನು ಬೇರು ಸಮೇತ ಕಡಿದು ಸಾಗಿಸುತ್ತಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ದೊರೆತ ಕೂಡಲೇ ಕಾರ್ಯಪ್ರವೃತ್ತರಾದ ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವನ್ನು ರಚಿಸಿ ದಾಳಿ ನಡೆಸಿದ್ದು, ಶ್ರೀಗಂಧ ಸಾಗಿಸುತ್ತಿದ್ದ ತಾಲೂಕಿನ ಗರ್ಬೇನಟ್ಟಿ ಗ್ರಾಮದ ನಿವಾಸಿ ಮಂಜು ಬಸಪ್ಪ ಮುರಗೋಡ ಎಂಬಾತನನ್ನು ಬಂಧಿಸಿ ಆತನಿಂದ ೧ ಕೆಜಿ ೨೦೦ ಗ್ರಾಂ ಶ್ರೀಗಂಧದ ಗಿಡ ಮತ್ತು ಬೇರು ಹಾಗೂ ಸಾಗಾಟಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಸೂಚನೆಯಂತೆ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿದೆ.

ದಾಳಿಯಲ್ಲಿ ನಾಗರಗಾಳಿ ಆರ್‌ಎಫ್‌ಒ ಪ್ರಶಾಂತ ಮಂಗಸೂಳಿ, ಮೇರಡಾ ಡಿಆರ್‌ಎಫ್‌ಒ ಎನ್ ಜಿ ಹಿರೇಮಠ, ಸಿಬ್ಬಂದಿ ವಿಜಯ ಕೌಜಲಗಿ, ಮಂಜು ಗೌಡರ ಪ್ರದೀಪ ತುರಮರಿ, ಶ್ರವಣ ಕುಮಾರ ಹಾಗೂ ಇತರರು ಭಾಗವಹಿಸಿದ್ದರು. ನಾಗರಗಾಳಿ ಆರ್‌ಎಫ್‌ಒ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button