Karnataka News

*ಮಠಕ್ಕೆ 3ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸ ಸ್ವಿಕರಿಸಿದ ಉದ್ಯಾಮಿ*

ಪ್ರಗತಿವಾಹಿನಿ ಸುದ್ದಿ : ರಾಜಸ್ಥಾನ ಮೂಲದ ಗಣಿ ಉದ್ಯಮಿಯೊಬ್ಬರು ತಮ್ಮ ಹೆಸರಲ್ಲಿದ್ದ 3 ಸಾವಿರ ಎಕರೆ ಭೂಮಿಯನ್ನು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ಬರೆದು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.

ಗಣಿ ಉದ್ಯಮಿ ಓಸ್ವಾಲ್‌ ಜೈನ್. ರಾಜಸ್ಥಾನ ಮಾತ್ರವಲ್ಲದೆ, ಮುಂಬೈ, ಗುಜರಾತ್, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಜಾಗ ಹೊಂದಿದ್ದರು. ಕಲ್ಲಿದ್ದಲು, ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು. ಈಗ ಜೀವನದಲ್ಲಿ ಮೋಕ್ಷ ಸಾಧನೆಗಾಗಿ 78 ವರ್ಷದ ಓಸ್ವಾಲ್ ಜೈನ್ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.

ಓಸ್ವಾಲ್ ಜೈನ್‌ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾಳೆ. ಇಬ್ಬರೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ನೀಡಿರುವ ಓಸ್ವಾಲ್‌ ಜೈನ್, ತಾವು ಬದುಕಿನಲ್ಲಿ ದುಡಿದು ಗಳಿಸಿದ ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆ ಆಸ್ತಿಯನ್ನು ಮಾತ್ರವೇ ದಾನ ಮಾಡಿದ್ದಾರೆ. ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿಗೆ ಕಾನೂನು ಪ್ರಕಾರ ಆಸ್ತಿ ಪತ್ರ ಹಸ್ತಾಂತರ ಮಾಡಿದ್ದಾರೆ.

ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಓಸ್ವಾಲ್ ಒಡನಾಟ ಹೊಂದಿದ್ದಾರೆ.ಜೈನ ವ್ರತಾಚರಣೆ ಮಾಡಿ ಅಹಿಂಸಾ ಪರಮೋಧರ್ಮ ಮತ್ತು ಮೋಕ್ಷ ಸಾಧನೆಗಾಗಿ ಮಠಕ್ಕೆ ಆಸ್ತಿಯನ್ನು ದಾನ ಮಾಡಿದ್ದೇನೆ ಎಂದು ಓಸ್ವಾಲ್‌ ತಿಳಿಸಿದ್ದಾರೆ.ಆಸ್ತಿ ಸ್ವೀಕರಿಸಿ ಸಮಾಜ ಸೇವೆಗೆ ಬಳಕೆ ಮಾಡಿಕೊಳ್ಳುತ್ತೇನೆ ಎಂದು ಡಾ. ಸಿದ್ದರಾಜ ಸ್ವಾಮೀಜಿ ತಿಳಿಸಿದ್ದಾರೆ. ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಗಣಿ ಉದ್ಯಮಿ ನಡೆಗೆ ಪಾಲನಹಳ್ಳಿ ಮಠದ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button