Kannada NewsKarnataka News

*ಇಂದಿನಿಂದ ಹಾಸನಾಂಬೆಯ ಜಾತ್ರಾ ಮಹೋತ್ಸವ*

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಇಂದಿನಿಂದ ಅದ್ದೂರು ಚಾಲನೆ ದೊರೆಯಲಿದೆ. ಇಂದು ಮಧ್ಯಾಹ್ನ ಹಾಸನಾಂಬೆ ದೇಗುಲದ ದ್ವಾರ ತೆರೆಯಲಿದೆ

ಅಶ್ವೇಜ ಮಾಸದ ಪೌರ್ಣಿಮೆಯ ನಂತರದಲ್ಲಿ ಆಗಮಿಸುವ ಮೊದಲ ಗರುವಾರದಂದು ಹಾಸನಾಂಬೆಯ ದೇಗುಲದ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತಗಣ ಕಾದು ಕುಳಿತಿದ್ದು 20 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಮಹೋತ್ಸವದ ಮೊದಲನೆಯ ದಿನವಾದ ಇಂದು ಭಕ್ತರಿಗೆ ದರ್ಶನ ಮಾಡಲು ಅವಕಾಶವಿರುವುದಿಲ್ಲ. ನಾಳೆಯಿಂದ 9 ದಿನಗಳ ಕಾಲ ಭಕ್ತರು ದೇವಿ ದರ್ಶನವನ್ನು ಪಡೆಯಬಹುದಾಗಿದೆ

ಹಾಸನಾಂಬೆ ದೇವಾಲಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹಾಸನ ನಗರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಕಳೆದ ಬಾರಿ ನಡೆದ ತಳ್ಳಾಟ ನೂಕಾಟದ ಪ್ರಕರಣದಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ದೇವಾಲಯದ ಬಳಿಗೆ ಬರುವ ಗಣ್ಯಾತಿಗಣ್ಯರಿಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಎರಡು ಮಾರ್ಗ ನಿರ್ಮಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button