ಪ್ರಗತಿವಾಹಿನಿ ಸುದ್ದಿ: ಸೋಷಿಯಲ್ ಮೀಡಿಯಾದಲ್ಲಿ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡಲಾಗ್ತಿದ್ದ 7 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಖಾಕಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಚಾಕು, ಡ್ರಾಗರ್, ಕಂಟ್ರಿ ಪಿಸ್ತೂಲ್ ಸೇರಿ ಅನೇಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರೋದನ್ನ ಪೊಲೀಸರು ಗಮನಿಸಿ ಕಾರ್ಯಾಚರಣೆ ನಡೆಸಿದ್ದಾರೆ. ವಾಟ್ಸಾಪ್, ಫೇಸ್ಟುಕ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ನಲ್ಲಿ ಆರೋಪಿಗಳು ಗ್ರಾಹಕರನ್ನು ಸಂಪರ್ಕ ಮಾಡುತ್ತಿದ್ದರು. ಆನ್ ಲೈನ್ ವಹಿವಾಟಿನಲ್ಲಿ ಹಣಕಾಸು ವ್ಯವಹಾರ ನಡೆಯುತ್ತಿತ್ತು. ಆರೋಪಿಗಳ ಐಪಿ ಅಡ್ರೆಸ್, ಸೋಷಿಯಲ್ ಮೀಡಿಯಾ ಮೆಸೇಜ್ ಗಳ ಸಹಾಯದಿಂದ ಆರೋಪಿಯನ್ನ ಖೆಡ್ಡಾಗೆ ಕೆಡವಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ