Latest

*ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಗುಜರಾತ್‌ನ ಕಚ್ ನಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ್ದಾರೆ.

ಗುರುವಾರ ಕಚ್ ಗೆ ಭೇಟಿ ನೀಡಿದ ಮೋದಿ ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾದಲ್ಲಿ ಭಾರತೀಯ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಬಳಿಕ ಸೈನಿಕರಿಗೆ ಸಿಹಿತಿಂಡಿಗಳನ್ನು ಹಂಚಿದರು.

ಲಕ್ಕಿ ನಾಲಾ ಸರ್ ಕ್ರೀಕ್ ಚಾನಲ್‌ನ ಒಂದು ಭಾಗವಾಗಿದೆ. ಇದು ಕ್ರೀಕ್ ಗಡಿಯ ಆರಂಭಿಕ ಹಂತವಾಗಿದ್ದು, ಅಲ್ಲಿ ಜವುಗು ಪ್ರದೇಶವಿದೆ. ಅಲ್ಲಿ ಗಸ್ತು ಕಾರ್ಯಾಚರಣೆಯನ್ನು ನಡೆಸುವುದು ತುಂಬಾ ಸವಾಲಿನ ಕೆಲಸವಾಗಿದೆ ಈ ಪ್ರದೇಶವು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕಣ್ಣಾವಲಿನಲ್ಲಿದೆ. ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರು ಆಗಾಗ್ಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುವ ಪ್ರದೇಶವಾಗಿದೆ.

ಇಂಥ ದುರ್ಗಮ ಪ್ರದೇಶದಲ್ಲಿ ಸಂಕಷ್ಟಗಳ ನಡುವೆಯೂ ಭಾರತದ ಗಡಿ ಸುರಕ್ಷತೆಗಾಗಿ ಹೋರಾಡುವ ಯೋಧರ ಕಾರ್ಯತತ್ಪರತೆಯನ್ನು ಮೋದಿ ಶ್ಲಾಘಿಸಿದ್ರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button