Kannada NewsKarnataka News

ಅಧ್ಯಯನ ಕೇವಲ ಕೋಣೆಗಳಿಗೆ ಮಾತ್ರ ಸೀಮಿತವಾಗಿರಬಾರದು: ರಾಮಚಂದ್ರಗೌಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಣಿಜ್ಯ ಪ್ರಪಂಚ ಬದಲಾದಂತೆಲ್ಲ ವಾಣಿಜ್ಯ ಶಾಸ್ತ್ರದಲ್ಲಿಅಧ್ಯಯನ ಮಾಡುವ ವಿಷಯಗಳಲ್ಲಿ ಬದಲಾಗಬೇಕು. ಅಧ್ಯಯನ ಮಾಡುವ ವಿದ್ಯಾರ್ಥಿಗಳ ದೃಷ್ಟಿಕೋನವೂ ಬದಲಾಗಬೇಕು. ವಾಸ್ತವಿಕ ಪ್ರಪಂಚದ ಅಗತ್ಯಗಳಿಗೆ ಅನುಸಾರವಾಗಿ ವ್ಯವಹಾರೋದ್ಯಮಗಳ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶನಿವಾರ ೧೨ ರಂದು ವಾಣಿಜ್ಯಶಾಸ್ತ್ರ ವಿಭಾಗದಕಾಮರ್ಸ್ ಅಸೋಸಿಯೆಷನ್‌ ಉದ್ಘಾಟಿಸಿ ಮಾತನಾಡಿದ ಅವರು,
ಅಧ್ಯಯನ ಕೇವಲ ಕೋಣೆಗಳಿಗೆ ಮಾತ್ರ ಸೀಮಿತವಾಗಿರದೇ ಪ್ರತ್ಯಕ್ಷ ಅನುಭವಗಳಿಂದ ಕೂಡಿರಬೇಕು. ವಾಣ ಜ್ಯಶಾಸ್ತ್ರದ ವಿದ್ಯಾರ್ಥಿಗಳು ಉದ್ಯೋಗ ಕೇಳುಗರಾಗದೇ ನೀಡುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರಾಮಾಣ ಕ ಪ್ರಯತ್ನಕ್ಕೆ ಸದಾಕಾಲ ಫಲಗಳು ದೊರೆಯುತ್ತದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನಕ್ಕೆ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತೀ ವರ್ಷ ಉತ್ತಮವಾಗಿದೆ. ಇನ್ನೂ ಮುಂದೆ ಇದು ಹೆಚ್ಚುತ್ತಾ ಹೋಗಬೇಕೆಂದರು.
ಹಿರಿಯ ಪ್ರಾಧ್ಯಾಪಕ ಪ್ರೊ. ಎಚ್.ವಾಯ್.ಕಾಂಬಳೆ ಮಾತನಾಡಿ, ವಿದ್ಯಾರ್ಥಿಗಳ ಅಧ್ಯಯನವು ಸ್ಪರ್ಧಾತ್ಮಕವಾಗಿರಬೇಕೆಂದರು.
ಪ್ರೊ.ಎಸ್. ಓ. ಹಲಸಗಿ ಮಾತನಾಡಿ, ವಾಣಿಜ್ಯಶಾಸ್ತ್ರ ವಿದ್ಯಾರ್ಥಿ ಕೇಂದ್ರಿಕೃತ ವ್ಯವಸ್ಥೆಯೊಂದಿಗೆ ಮುನ್ನಡೆಯುತ್ತಿದೆ. ಭವಿಷ್ಯತ್ತಿನ ಅವಶ್ಯಕತೆಗಳನ್ನು ಪೂರೈಸಲುಸತತ ಪ್ರಯತ್ನ ಮಾಡುತ್ತಿದೆ. ಅನುಭವಿ ಉಪನ್ಯಾಸಕರು ಸದಾ ಕಾಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ವಾಣಿಜ್ಯಶಾಸ್ತ್ರ ಸಂಘದ ಸಂಯೋಜಕ ಸಚೀಂದ್ರ ಪಿ.ಆರ್, ಉಪನ್ಯಾಸಕಿ ಯಾಸ್ಮಿನ್ ನದಾಫ್ ಪ್ರಮಾಣವಚನ ಬೋಧಿಸಿದರು. ಲಕ್ಷ್ಮೀ ಸ್ವಾಗತಿಸಿದರು, ಪ್ರಿಯಾಂಕ ಹಾಗೂ ಸಹಪಾಠಿಗಳು ಪ್ರಾರ್ಥಿಸಿದರು, ಕಾಶವ್ವಾ, ವಿದ್ಯಾ ನಿರೂಪಿಸಿದರು. ಸುಜಾತಾ ಕರಗುಪ್ಪಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button