Kannada NewsKarnataka News
*ಮತ್ತೆ ಆರ್ಭಟಿಸಲಿದೆ ಮಳೆ: ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಇನ್ನೇನು ಚಳಿಗಾಲ ಆರಂಭವಾಯ್ತು ಎನ್ನುವಷ್ಟರಲ್ಲೆ ಮತ್ತೆ ಮಳೆ ಅಬ್ಬರಿಸಲಿದೆ. 7 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ಮತ್ತೆ ವರುಣ ಆರ್ಭಟಿಸಲಿದೆ. ರಾಜ್ಯರಾಜಧಾನಿ ಬೆಂಗಳುರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ʻಯೆಲ್ಲೋʼ ಅಲರ್ಟ್ ಘೋಷಿಸಿದೆ.
ಇನ್ನುಳಿದಂತೆ ಇನ್ನೂ ಎರಡ್ಮೂರು ದಿನ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ನ. 5ರ ನಂತರ ಮಳೆ ಸಂಪೂರ್ಣ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.



