Kannada NewsKarnataka News
*ಹಬ್ಬದ ದಿನ ಸಾಲು ಸಾಲು ಅಪಘಾತ: ಮತ್ತೆ ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ: ಡಿವೈಡರ್ ಮೇಲೆ ನಿಂತಿದ್ದ ಇಬ್ಬರು ಕಾರ್ಮಿಕರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಇಂದು ಕೋಲಾರ ನಗರದ ಹೊರವಲಯದ ಪವನ್ ಕಾಲೇಜು ಬಳಿ ನಡೆದಿದೆ.
ಮೃತರನ್ನು ಉತ್ತರ ಭಾರತ ಮೂಲದ ಕಿರಣ್ ಹಾಗೂ ರಜನಿಸಿಂಗ್ ಎಂದು ಗುರುತಿಸಲಾಗಿದೆ. ರಸ್ತೆ ದಾಟಲೆಂದು ಡಿವೈಡರ್ ಹತ್ತಿದ್ದ ಇಬ್ಬರು ಕಾರ್ಮಿಕರು, ಇದೇ ವೇಳೆ ಕಾರು ವೇಗವಾಗಿ ಬಂದು ಅವರು ನಿಂತಿದ್ದ ಡಿವೈಡರ್ ಜಾಗದಲ್ಲೇ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಇಬ್ಬರೂ ಅಸುನೀಗಿದ್ದಾರೆ. ಸ್ಥಳಕ್ಕೆ ಕೋಲಾರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.




