ಪ್ರಗತಿವಾಹಿನಿ ಸುದ್ದಿ: ತನ್ನ ಪುತ್ರನಿಗೆ ಮದುವೆ ಮಾಡಿಸಲು ವಧು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಕೋರ್ಟ್ 60 ಸಾವಿರ ರೂಪಾಯಿ ದಂಡವನ್ನು ವಿಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಗ್ರಾಹಕ ನ್ಯಾಯಾಲಯ, ಮ್ಯಾಟ್ರಿಮೋನಿ ಪೋರ್ಟಲ್‌ಗೆ ಈ ಮೊತ್ತದ ದಂಡ ವಿಧಿಸಿ ಆದೇಶಿಸಿದೆ. ಬೆಂಗಳೂರಿನ ಎಂಎಸ್ ನಗರದ ನಿವಾಸಿ ವಿಜಯಕುಮಾರ್ ಕೆ.ಎಸ್ ಎಂಬುವವರು ತಮ್ಮ ಪುತ್ರ ಬಾಲಾಜಿಗೆ ವಧುವಿನ ಹುಡುಕಾಟದಲ್ಲಿದ್ದರು. ಕಲ್ಯಾಣ್ ನಗರದಲ್ಲಿ ಕಚೇರಿಯನ್ನು ಹೊಂದಿರುವ ದಿಲ್ ಮ್ಯಾಟ್ರಿಮೋನಿ ಪೋರ್ಟಲ್ ಅನ್ನು ಸಂಪರ್ಕಿಸಿದ್ದರು.
ಕಳೆದ ಮಾ.17 ರಂದು ವಿಜಯ ಕುಮಾರ್ ಅವರು ತಮ್ಮ ಪುತ್ರನ ಅಗತ್ಯ ದಾಖಲೆಗಳು ಮತ್ತು ಫೋಟೋಗಳನ್ನು ಸಲ್ಲಿಸಿದ್ದರು. ವಧುವನ್ನು ಹುಡುಕಿಲು 30,000 ರೂಪಾಯಿ ಪಾವತಿಸುವಂತೆ ದಿಲ್ಕಿಲ್ ಮ್ಯಾಟ್ರಿಮೋನಿ ಬೇಡಿಕೆಯಂತೆ ಮುಂಗಡವಾಗಿಯೂ ಪಾವತಿಸಿದ್ದರು. 45 ದಿನಗಳಲ್ಲಿ ಬಾಲಾಜಿಗೆ ವಧುವನ್ನು ಹುಡುಕುವುದಾಗಿ ದಿಲ್ಮೀಲ್ ಮ್ಯಾಟ್ರಿಮೋನಿ ಭರವಸೆಯೂ ನೀಡಿತ್ತು. ಆದರೆ ದಿಲ್ಮೀಲ್ ಮ್ಯಾಟ್ರಿಮೋನಿ ನಿಗದಿತ ಸಮಯಕ್ಕೆ ವಧುವನ್ನು ಹುಡುಕಲು ವಿಫಲವಾಗಿದೆ.
ಅಲ್ಲದೇ ವಿಜಯ ಕುಮಾರ್ ಅವರನ್ನು ಮ್ಯಾಟ್ರಿಮೊನಿ ಕಚೇರಿಗೆ ಅಲೇದಾಡುವಂತೆಯೂ ಮಾಡಲಾಗಿತ್ತು ಎಂಬ ಆರೋಪವೂ ಇದೆ. ಇದರಿಂದ ನೊಂದು ಕೋರ್ಟ್ ಮೆಟ್ಟಿಲು ಹತ್ತಿದಾಗ, ವಿಚಾರಣೆ ನಡೆಸಿದ ನ್ಯಾಯಾಲಯ ಮ್ಯಾಟ್ರಿಮೊನಿಗೆ ದಂಡ ವಿಧಿಸಿ ಆದೇಶಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ