Election NewsPolitics

*ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಉಪಚುನಾವಣೆಯ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗೂ ಮೀರಿ ಜನರು ತಮ್ಮ ಬೆಂಬಲವನ್ನು ವ್ಯಕ್ತವಾಗುತ್ತಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಸಂಡೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಯತ್ನಾಳ್ ಅವರದ್ದು ರಾಜಕೀಯ ಪ್ರತಿಭಟನೆ

ವಿಜಯಪುರಕ್ಕೆ ವಕ್ಫ್ ಬೋರ್ಡ್ ಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಆಗಮಿಸಿರುವ ಬಗ್ಗೆ ಹಾಗೂ ಬಸವನಗೌಡ ಯತ್ನಾಳ್ ಅವರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಕ್ಫ್ ಬೋರ್ಡ್ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಯತ್ನಾಳ್ ಅವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಂಟಿ ಸಂಸದೀಯ ಸಮಿತಿಯವರು ಭೇಟಿ ನೀಡಿದ್ದೂ ಕೂಡ ರಾಜಕೀಯವಾಗಿ. ಹಿಂದೆ ಯಾವಾಗ ಬಂದಿದ್ದರು ಎಂದು ಪ್ರಶ್ನಿಸಿದರು.

Home add -Advt

ಸಮಸ್ಯೆ ಎಲ್ಲಿದೆ?

ಒಂದು ವೇಳೆ ಯಾರಿಗಾದರೂ ನೋಟೀಸು ನೀಡಲಾಗಿದ್ದರೆ ಅದನ್ನು ವಾಪಸು ಪಡೆಯುವುದಾಗಿ ಸ್ಪಷ್ಟವಾಗಿ ಈಗಾಗಲೇ ತಿಳಿಸಲಾಗಿದೆ. ಯಾರನ್ನೂ ನಾವು ಒಕ್ಕಲೆಬ್ಬಿಸುವುದಿಲ್ಲ. ಒಂದು ವೇಳೆ ದಾಖಲಾತಿಗಳು ತಿದ್ದುಪಡಿಯಾಗಿದ್ದರೆ ಅದನ್ನು ರದ್ದು ಮಾಡುತ್ತೇವೆ ಎಂದು ಹೇಳಿದ ಮೇಲೆ ಸಮಸ್ಯೆ ಎಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

Related Articles

Back to top button