Latest

ರಣಬೀರ್‍ನನ್ನು ಮಾನಸಿಕವಾಗಿ ಮದುವೆಯಾಗಿದ್ದೇನೆ ಎಂದ ಆಲಿಯಾ ಭಟ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ರಣಬೀರ್ ಮತ್ತು ಆಲಿಯಾ ಭಟ್ ನಡುವಿನ ಸಂಬಂಧದ ಕುರಿತು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಇವರಿಬ್ಬರೂ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಹಲವಾರು ದಿನಗಳಿಂದ ಕಾಡುತ್ತಿದೆ.

ಈ ನಡುವೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ರಣಬೀರ್ ಕೋವಿಡ್ ಸೋಂಕು ಹರಡಿರದಿದ್ದರೆ ನಾವು 2020ರಲ್ಲೇ ಮದುವೆಯಾಗುತ್ತಿದ್ದೆವು ಎಂದೂ ಹೇಳಿಕೊಂಡಿದ್ದಾರೆ.

Home add -Advt

ಇನ್ನೊಂದೆಡೆ ಇತ್ತೀಚಗೆ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಮಾತನಾಡಿರುವ ಆಲಿಯಾ, ನಾನು ಈಗಾಗಲೇ ರಣಬೀರ್‍ನನ್ನು ಮಾನಸಿಕವಾಗಿ ವಿವಾಹವಾಗಿದ್ದೇನೆ ಎಂದಿದ್ದಾರೆ. ಅಧೀಕೃತವಾಗಿ ವಿವಾಹವಾಗುವ ಸಂದರ್ಭ ಅತ್ಯಂತ ಮಧುರವಾಗಿರಲಿದೆ ಎಂದು ಹೇಳಿದ್ದಾರೆ.

ಬಾಲಿವುಡ್‍ನ ಈ ಜೋಡಿಯ ವಿವಾಹ ಯಾವಾಗ ಆಗಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹಾಗೆಯೇ ಉಳಿದಿದ್ದು ಕಾತರದಿಂದ ನಿರೀಕ್ಷಿಸುವಂತಾಗಿದೆ.

ಹನಿಮೂನ್ ನಲ್ಲಿ ಮೌನಿ ರಾಯ್ ಹಾಟ್ ಲುಕ್

Related Articles

Back to top button