Film & EntertainmentKannada NewsLatest

*ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಖ್ಯಾತ ನಿರ್ದೇಶಕ ಹೋಟೆಲ್ ರೂಂ ನಲ್ಲಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಉದಯೋನ್ಮುಖ ನಿರ್ದೇಶಕರೊಬ್ಬರು ಹೋಟೆಲ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಲಯಾಳಂನ ಉದಯೋನ್ಮುಖ ನಿರ್ದೇಶಕ 28 ವರ್ಷದ ಬೆಲ್‌ರಾಜ್ ಕಳರಿಕಲ್ ಅವರು ಕೊಚ್ಚಿಯ ಹೋಟೆಲ್ ವೊಂದರ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿಯಾಗಿದ್ದಾರೆ.

ಬೇಲ್ ರಾಜ್ ಅವರ ನಿಧನದ ಸುದ್ದಿ ಇಡೀ ಮಲಯಾಳಂ ಚಿತ್ರರಂಗಕ್ಕೆ ಆಘಾತ ತಂದಿದೆ. ಅವರ ನಿರ್ದೇಶನದ ಮೊದಲ ವೆಬ್ ಸಿರೀಸ್ ‘ಕಾಪಿ ಸ್ಕ್ವಾಡ್’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ದುರಂತ ನಡೆದಿದೆ.

ಬೆಲ್‌ರಾಜ್ ಕಳರಿಕಲ್ ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಅವರು ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ. ಅವರ ಮೃತದೇಹವನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಲ್‌ರಾಜ್ ಕಳರಿಕಲ್ ಅವರು ‘ಒಟ್ಟಮುರಿ ವೆಲಿಚಂ’, ‘ಕೇರಳ ಕ್ರೈಮ್ ಫೈಲ್ಸ್’ ಮುಂತಾದ ಪ್ರಾಜೆಕ್ಟ್​ಗಳಿಂದ ಹೆಸರುವಾಸಿಯಾದ ‘ಫಸ್ಟ್ ಪ್ರಿಂಟ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸ್ವತಂತ್ರ ನಿರ್ದೇಶಕರಾಗುವ ಮೊದಲು ಅವರು ‘ನಿಳಲ್’, ‘ಮಧುರಂ’, ‘ಡಾಕಿನಿ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕಾಪಿ ಸ್ಕ್ವಾಡ್’ ವೆಬ್ ಸೀರೀಸ್ ಬೆಲ್‌ರಾಜ್ ಕಳರಿಕಲ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು.

ಬೆಲ್‌ರಾಜ್ ಕಳರಿಕಲ್ ಅವರು 6 ವರ್ಷಗಳ ಕಾಲ ಪ್ರೀತಿಸಿ ಒಂದು ತಿಂಗಳ ಹಿಂದಷ್ಟೇ ಆಥಿರಾ ಬಿಂದು ಸಾಬು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲೇ ಈ ಘಟನೆ ನಡೆದಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಪತ್ನಿ ಆಥಿರಾ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button