
ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಪಾಲಿಕೆ ಗುತ್ತಿಗೆ ನೌಕರನನ್ನು ವಜಾಗೊಳಿಸಲಾಗಿದೆ.
ಮೈಸೂರು ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಮೈಸೂರು ಪಾಲಿಕೆ ಗುತ್ತಿಗೆ ನೌಕರ ಬಿ.ಕೆ.ಕುಮಾರ್ ರನ್ನು ವಜಾಗೊಳಿ ಆದೇಶ ಹೊರಡಿಸಿದ್ದಾರೆ.
ಬಿ.ಕೆ.ಕುಮಾರ್ ಮುಡಾ ಹಗರಣದ ಕಿಂಗ್ ಪಿನ್ ಎಂಬ ಆರೋಪ ಕೇಳಿಬಂದಿದೆ. ಕುಮಾರ್ ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದರು. ಮುಡಾದಲ್ಲಿ ಕೆಲಸ ಮಾಡುತ್ತಾ ಪಾಲಿಕೆಯಿಂದಲೂ ಸಂಬಳ ಪಡೆಯುತ್ತಿದ್ದರು. ಏಕಕಾಲದಲ್ಲಿ ಎರಡು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಇದೀಗ ಪಾಲಿಕೆ ಕೆಲಸದಿಂದ ವಜಾಗೊಳಿಸಲಾಗಿದೆ.
ಮುಡಾ ಹಗರಣದಲ್ಲಿ ಕುಮಾರ್ ಪಾರ ಮಹತ್ವದ್ದಾಗಿದ್ದು, ಹಿಂದಿನ ಆಯುಕ್ತರಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯ ದಾಖಲೆ ತಂದು ಕೊಡುತ್ತಿದ್ದ ಬಗ್ಗೆ ಆರೋಪವಿದೆ.
 
					 
				 
					 
					 
					 
					
 
					 
					 
					


