Kannada NewsKarnataka News

ಕೇರಳ ಪೊಲೀಸರ ಮಾದಕ ವಸ್ತು ವಿರೋಧಿ ರ್ಯಾಲಿ ಬೆಳಗಾವಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ನಾರ್ಕೋಟಿಕ್ ಡ್ರಗ್ಸ್ ಮತ್ತು ಮಾದಕ ವಸ್ತುಗಳ ಹಾನಿಯ ಬಗ್ಗೆ ತಿಳಿವಳಿಕೆ ಮೂಡಿಸಲು ಕೇರಳದ ಮೂವರು ಪೊಲೀಸ್ ಇನ್ಸಪೆಕ್ಟರ್ಸ್ ಸೈಕಲ್ ಸಂಚಾರ ಹೊರಟಿದ್ದು ಬುಧವಾರ ಬೆಳಗಾವಿ ತಲುಪಿದರು.
ಸೈಕಲ್ ತಂಡಕ್ಕೆ ಬೆಳಗಾವಿ ವಲಯ ಐಜಿಪಿ ರಾಘವೇಂದ್ರ ಸುಹಾಸ, ಬೆಳಗಾವಿ ನಗರ ಡಿಸಿಪಿ ಸೀಮಾ ಲಾಟಕರ ಹಾಗೂ ನಗರ ಪೊಲೀಸ್ ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ, ವಲಯ ಅರಣ್ಯಾಧಿಕಾರಿ ಸಂಗಮೇಶ ಪ್ರಭಾಕರ, ಸುಪರ್ ರ್ಯಾಂಡೊನಿಯರ್ ಸೈಕ್ಲಿಸ್ಟ್ ಸಂಜಯ ಕುರಬರ ಸ್ವಾಗತಿಸಿದರು.
ಕೊಚ್ಚಿ- ತಿರಚೂರು, ಪಾಲಕಡ, ಕೊಯಮುತ್ತೂರು, ಈರೋಡ್, ಸೇಲಂ, ಕೃಷ್ಣಗಿರಿ, ಬೆಂಗಳೂರು, ಶಿರಾ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮೂಲಕ ಒಟ್ಟು 1000ಕೀಮಿ ಸಾಗಿದ್ದು, ಇನ್ನೂ ಸಾವಿರ ಕಿಮೀ ಮುಂದೆ ಸಾಗಲಿದ್ದಾರೆ.
ಕಳೆದ ಅಕ್ಟೋಬರ್ 5ರಂದು ಕೊಚ್ಚಿ ಪೊಲೀಸ್ ಕಮಿಷ್ನರ್ ಹಾಗೂ ಐಜಿಪಿ  ವಿಜಯ ಸಾಕರೆ ಮೂವರು ಇನ್ಸಪೆಕ್ಟರ್ ಗಳಿಗೆ  say no to drugs, yes to cycling ಸೈಕಲ್ ರ್ಯಾಲಿಗೆ ಚಾಲನೆ ನೀಡಿದ್ದರು.
ಕೇರಳದ ಮಟಾಂಚರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಬಿ. ಎಸ್. ನವಾಜ್,   ಅಂಬಲಪುರ ಠಾಣೆಯ ವಿನಿಲ್ ಎಂ. ಕೆ., ತೊಟಪಳ್ಳಿ ಕೋಸ್ಟಲ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅಲೆಕ್ಸ್ ವರ್ಕಿ ಸೈಕಲ್ ಸವಾರಿ ಹೊರಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button