Kannada NewsKarnataka News

ಬಾಲಕನ ಚಿಕಿತ್ಸೆಗೆ 3 ಲಕ್ಷ ರೂ. ಮಂಜೂರು ಮಾಡಿದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಅನಾರೋಗ್ಯದಿಂದ ಬಳಲುತ್ತಿರುವ ಕುಮಾರ ಸ್ವಯಂ ಕಮಲಾಕರ ಘಾಡಿಗಾಂವಕರ, ಸಾ. ಅನಗೋಳ, ಬೆಳಗಾವಿ ಈತನ ಚಿಕಿತ್ಸೆಗೆ ವೈದ್ಯರು ಸುಮಾರು ೫ ಲಕ್ಷ ರೂಪಾಯಿಗಳು ವೆಚ್ಚವಾಗುವುದಾಗಿ ತಿಳಿಸಿದ್ದರು. ಈತನ ತಂದೆ ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಾಗಿ ಶಾಸಕ ಅಭಯ ಪಾಟೀಲ ಬುಧವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬಳಿ ಬಾಲಕ ಮತ್ತು ಆತನ ಪಾಲಕರನ್ನು ಕರೆ ತಂದು ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ  ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೩ ಲಕ್ಷ ರೂಪಾಯಿಗಳ ಸಹಾಯಧನವನ್ನು ಬಿಡುಗಡೆ ಮಾಡಿಸಿದರು. ಹಾಗೂ ಇನ್ನುಳಿದ ೨ ಲಕ್ಷ ರೂಪಾಯಿಗಳನ್ನು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಕೂಡಿಸುವಂತ ಪ್ರಯತ್ನವನ್ನು ಮಾಡುವುದಾಗಿ ಶಾಸಕ ಅಭಯ ಪಾಟೀಲ ತಿಳಿಸಿದರು.

Home add -Advt

Related Articles

Back to top button