Kannada NewsKarnataka NewsNational

*44 ಆಪರೇಷನ್ ಮಾಡಿದ ನಕಲಿ ವೈದ್ಯ: ಮುಂದೇನು ಆಯ್ತು..?*

ಪ್ರಗತಿವಾಹಿನಿ ಸುದ್ದಿ : ಪಿಜಿ ಕೋರ್ಸ್ ವ್ಯಾಸಂಗ ಮಾಡ್ತಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನ ಹರಿಯಾಣದ ಹಿಸಾರ್ ನ ಆಸ್ಪತ್ರೆಗೆ ನೇಮಕ ಮಾಡಿದ್ದು, ಪದವಿಗೂ ಮುನ್ನವೇ ಆ ಡಾಕ್ಟರ್ 44 ಕಣ್ಣಿನ ಆಪರೇಷನ್ ಮಾಡಿದ್ದಾನೆ.  

ಹರಿಯಾಣಾದ ಆರೋಗ್ಯ ಇಲಾಖೆ ಕಣ್ಣಿನ ಸಮಸ್ಯೆ ಇರುವ ರೋಗಿಗಳ ಬಾಳಲ್ಲಿ ಚೆಲ್ಲಾಟವಾಡಿದೆ. ಈ ನಕಲಿ ವೈದ್ಯನನ್ನು ಸದ್ಯ NBCP ಆ ಡಾಕ್ಟರ್ ಮೇಲೆ ನಿರ್ಬಂಧ ಹೇರಿದೆ.

ಕಳೆದ 4 ತಿಂಗಳಿಂದ ಹಿಸಾರ್ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಷನ್ ಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಪರಿಣಾಮ ಕ್ಯಾಟ್ರಾಕ್ಟ್ ಆಪರೇಷನ್, ರೇಟಿನೋಪತಿ, ಸೇರಿದಂತೆ ಇನ್ನಿತರ ಆಪರೇಷನ್ ಅದ್ರೋಹ ಮೆಡಿಕಲ್‌ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.

3 ಮಂದಿ ನುರಿತ ವೈದ್ಯರನ್ನ ಹಿಸಾರ್ ಆಸ್ಪತ್ರೆಗೆ ನೇಮಕ ಮಾಡಲಾಗಿತ್ತು ಆದ್ರೆ, ಎಲ್ಲರೂ ರಿಸೈನ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಆರಂಭ ಮಾಡಿದ್ದಾರೆ. ಹೀಗಾಗಿ ಡಾ. ವಿಜಯ್ ಎಂಬ ಡಾಕ್ಟರ್ ನೇಮಕ ಮಾಡಲಾಗಿತ್ತು. ಆದ್ರೆ ಡಾ. ವಿಜಯ್ ಪಿಜಿ ಕೋರ್ಸ್ ಅಪೂರ್ಣವಾಗಿದೆ. ಹೀಗಿದ್ದರೂ ಡಾ. ವಿಜಯ್ 44 ಆಪರೇಶನ್ ಮಾಡಿದ್ದಾರೆ. ಪದವಿಗೂ ಮುನ್ನವೇ ಆಪರೇಷನ್ ಮಾಡಿರೋದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ವೈದ್ಯೆ ಡಾ. ಜ್ಯೋತಿ ಮಾರ್ಗದರ್ಶನದಲ್ಲಿ ಡಾ. ವಿಜಯ್ ಆಪರೇಷನ್ ಮಾಡಿದ್ದಾರೆ.

NBCP ಡಾ. ವಿಜಯ್ ಮೇಲೆ ನಿರ್ಬಂಧ ಹೇರಿದೆ. ಆಪರೇಶನ್ ಒಳಗಾಗಿರುವ 44 ಮಂದಿ ಪೇಶೆಂಟ್ಸ್ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button