ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಇನ್ನು ಈ ಹೀನಾಯ ಸೋಲಿನ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಈ ಸೋಲಿಗೆಲ್ಲಾ ಕಾರಣ ಪೂಜ್ಯ ತಂದೆ, ಕಿರಿ ಮಗನೇ ಕಾರಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಟೀಕಿಸಿದರು.
ವಿಜಯೇಂದ್ರ ನೇತೃತ್ವವನ್ನು ರಾಜ್ಯದ ಜನ ಒಪ್ಪಿಲ್ಲ. ಈ ವಿಚಾರ ವಿಜಯೇಂದ್ರಗೂ ಗೊತ್ತು. ಬಿಜೆಪಿಗೆ ಎಲ್ಲಾ ಬಾಗಿಲು ಬಂದ್ ಆದಂತಿವೆ. ಬಿಜೆಪಿಗೆ ಇಂತಹ ಹೀನಾಯ ಸೋಲಿಗೆ ಅವರೇ ಕಾರಣ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ ಇದೆಲ್ಲವೂ ಒಳ ಒಪ್ಪಂದದಿಂದ ಬಿಜೆಪಿಗೆ ಇಂತಹ ಪರಿಸ್ಥಿತಿ ಬಂದಿದೆ. ಇನ್ನಾದರೂ ಹೈಕಮಾಂಡ್ ಈ ರಾಜ್ಯದ ಪಕ್ಷದ ಉಸ್ತುವಾರಿಯನ್ನು ಪ್ರಾಮಾಣಿಕರನ್ನ, ಸಂಸ್ಕಾರ ಇದ್ದರವರಿಗೆ ವಹಿಸಲಿ. ಈ ಹಿಂದೆ ಅರುಣ್ ಸಿಂಗ್ ಅವರು ಯಡಿಯೂರಪ್ಪ-ವಿಜಯೇಂದ್ರಗೆ ಸಂದೇಶ ವಾಹಕನಾಗಿ ಕೆಲಸ ಮಾಡಿದ ಪರಿಣಾಮ ಬಿಜೆಪಿ ಈ ಗತಿ ಬಂದಿದೆ ಎಂದು ಯತ್ನಾಳ್ ಅವರು ಸ್ವಪಕ್ಷದ ವಿರುದ್ಧ ಗುಡುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ