ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ ವತಿಯಿಂದ ನೆಹರು ನಗರದ 110 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ.27 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸದಾಶಿವ ನಗರ 33 ಕೆ.ವಿ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ, ಕಂಗ್ರಾಳಿ ಕೆ.ಎಚ್. ಅಲತಗಾ, ಅಂಬೇವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಬೆಳಗಾವಿಯ ಕಾರ್ಯ ಮತ್ತು ಪಾಲಪಾ ಗ್ರಾಮೀಣ ವಿಭಾಗ, ಹುವಿಸಕಂನಿಯ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಕಣಬರ್ಗಿ ಉಪಕೇಂದ್ರದಲ್ಲಿ ಮೂರನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ.27 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ.
ಮುಚ್ಚಂಡಿ, ಅಷ್ಟೆ, ಕ್ಯಾಂಪ್ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ಧಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ದಾಸರವಾಡಿ, ಕೆಂಚ್ಯಾನಟ್ಟಿ, ಸೋನಟ್ಟಿ, ಕಾಕತಿ, ಕಂಗ್ರಾಳಿ ಬಿ.ಕೆ, ಬೈಲೂರ, ಹೆಗ್ಗೇರಿ, ಹುಲ್ಯಾನೂರ, ಬುಡಾನೂರ, ಧರನಟ್ಟಿ, ಭರನಟ್ಟಿ, ಗೌಂಡವಾಡ, ಕಡೋಲಿ, ಅಗಸಗಾ ಹಾಗೂ ಜಾಫರವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನಾ ಗ್ರಾಮೀಣ ವಿಭಾಗ, ಹುವಿಸಕಂನಿನ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ