Belagavi NewsBelgaum NewsKarnataka News

*ಬೆಳಗಾವಿ: ಆಸ್ಪತ್ರೆಯಲ್ಲಿಯೇ ಯುವಕನಿಂದ ನರ್ಸ್ ಮೇಲೆ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಲ್ಲಿಯೇ ಯುವಕನೊಬ್ಬ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಲಗಾವಿ ನಗರದಲ್ಲಿ ನಡೆದಿದೆ.

Home add -Advt

ಪ್ರಕಾಶ್ ಜಾದವ್ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಓರ್ವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಯುವಕ ಹೆಲ್ಮೆಟ್ ಧರಿಸಿಕೊಂಡು ಆಸ್ಪತ್ರೆಗೆ ಆಗಮಿಸಿದ್ದಾನೆ. ಪ್ಲಾಸ್ಟಿಕ್ ಕವರ್ ನಲ್ಲಿ ತಂದಿದ್ದ ಮಚ್ಚಿನಿಂದ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂದ ಆಸ್ಪತೆಯಲ್ಲಿದ್ದ ರೋಗಿಗಳು ಕಂಗಾಲಾಗಿ ಓಡಿದ್ದಾರೆ.

ನರ್ಸ್ ಗೆ ಪ್ರಕಾಶ್ ಜಾದವ್ ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಅಲ್ಲದೇ ಮದುವೆಯಾಗುವಂಎ ಒತ್ತಾಯಿಸಿದ್ದ. ಕುಟುಂಬದವರನ್ನು ಆಕೆ ಮನೆಗೆ ಕರೆದೊಯ್ದು ಮದುವೆ ಪ್ರಸ್ತಾಪ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಯುವತಿ ಒಪ್ಪಿಲ್ಲ. ಇದೇ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆಆಗಮಿಸಿದ ಬೆಳಗಾವಿ ಖದೇಬಜಾರ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related Articles

Back to top button