ಪ್ರಗತಿವಾಹಿನಿ ಸುದ್ದಿ: ನೆರೆಯ ಮಹಾರಾಷ್ಟ್ರ ರಾಜ್ಯದ ಶಿರೋಳ ತಾಲ್ಲೂಕಿನ ಸಾಂಗಲಿ ಕೊಲ್ಲಾಪುರ ಹೆದ್ದಾರಿಯಲ್ಲಿ ಕೃಷ್ಣಾ ನದಿಯ ಅಂಕಲಿ ಸೇತುವೆಯಿಂದ ಕಾರೊಂದು ಬಿದ್ದ ಘಟನೆ ಮಧ್ಯರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಸಾಂಗ್ಲಿ ಮೂಲದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಪ್ರಸಾದ ಬಾಲಚಂದ್ರ ಖೇಡೇಕರ್ (35) ಮತ್ತು ಪತ್ನಿ ಪ್ರೇರಣಾ ಪ್ರಸಾದ ಖೇಡೇಕರ, ವೈಷ್ಣವಿ ಸಂತೋಷ ನಾರ್ವೇಕರ ಮೃತಪಟ್ಟವರು ಎಂದು ತಿಳಿದು ಬಂದಿದೆ. ಸಮರ್ಜಿತ್ ಪ್ರಸಾದ ಖೇಡೇಕರ್ (7) ವರದ ಸಂತೋಷ ನಾರ್ವೇಕರ (19) ಮತ್ತು ಸಾಕ್ಷಿ ಸಂತೋಷ ನಾರ್ವೇಕರ್ (42) ಗಂಭೀರವಾಗಿ ಗಾಯಗೊಂಡವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜೈಸಿಂಗಪುರ ಪೊಲೀಸರು ಭೇಟಿಯನ್ನು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ