National

*ಭೂಕುಸಿತ ಪ್ರಕರಣ: ನಾಲ್ವರ ಮೃತದೇಹ ಹೊರ ತೆಗೆದ ರಕ್ಷಣಾ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಫೆಂಗಲ್ ಸೈಕ್ಲೋನ್ ಪರಿಣಾಮವಾಗಿ ಸುರಿಯುತ್ತಿರುವ ಭಾರಿ ಮಳೆ ಅನೇಕ ರಾಜ್ಯಗಳಿಗೆ ಸಂಕಷ್ಟ ತಂದಿದೆ. ಮಳೆಯಿಂದ ಚೆನ್ನೈ ತಿರುವಣ್ಣಾಮಲೈನಲ್ಲಿ ಸಂಭವಿಸಿದ್ದ ಭೂಕುಸಿತಕ್ಕೆ ಸಂಬಂಧಿಸಿ ರಕ್ಷಣಾ ಪಡೆ ನಾಲ್ವರ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

ತಮಿಳುನಾಡಿನ ತಿರುವಣಾಮಲೈನಲ್ಲಿ  ಭಾನುವಾರ ಮೊದಲ ಭೂಕುಸಿತ ಉಂಟಾಗಿತ್ತು. ಅದಾದ ಬಳಿಕ ಎರಡನೇ ಭೂಕುಸಿತ ಉಂಟಾಗಿದೆ. ಭೂ ಕುಸಿತದಲ್ಲಿ ಬೃಹತ್ ಬಂಡೆಯೊಂದು ಮನೆಯ ಮೇಲೆ ಬಿದ್ದು 5 ಮಕ್ಕಳು ಸೇರಿದಂತೆ 7 ಜನರು ಮೃತಪಟ್ಟಿದ್ದರು. ಇದೀಗ ನಾಲ್ಕು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button