*ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ ಸರ್ಕಾರ ಸಿಲುಕಿದೆ: ಆರ್ ಅಶೋಕ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಆಸತ್ರೆಗಳಲ್ಲಿ ಬಾಣಂತಿ, ಶಿಶುಗಳ ಸಾವಿನ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ನಿಲುವಳಿ ಸೂಚನೆ ತರಲು ತೀರ್ಮಾನ ಮಾಡಿದ್ದೇವೆ. ಬಾಣಂತಿಯರು, ಶಿಶುಗಳ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ನಾವು ಒತ್ತಾಯ ಮಾಡುತ್ತೇವೆ. ಸರ್ಕಾರ ಉತ್ತರ ಕೊಡುವವರೆಗೂ ನಾವು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರು ತಿಂಗಳಿಂದ 111 ಶಿಶುಗಳ ಮರಣ ಆಗಿದೆ, ಎಂಟು ಜನ ಬಾಣಂತಿಯರ ಸಾವಾಗಿದೆ. ಇಡಿ ಜಿಲ್ಲೆಯಲ್ಲಿ ಮುನ್ನೂರಕ್ಕೂ ಅಧಿಕ ಮಕ್ಕಳ ಸಾವಾಗಿದೆ. ಸರಣಿ ರೀತಿಯಲ್ಲಿ ಪ್ರತಿ ದಿನ ಬಾಣಂತಿಯರು ಐವಿ ದ್ರವಣದಿಂದ ಸಾವನ್ನಪ್ಪಿದ್ದಾರೆ. ಸರ್ಕಾರ ಅವರಿಗೆ ಸರಿಯಾದ ಔಷಧ, ಚಿಕಿತ್ಸೆ ಕೊಡಬೇಕು. ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ ಸರ್ಕಾರ ಸಿಲುಕಿದೆ. ಇಷ್ಟೆಲ್ಲಾ ಆದ್ರೂ ಸರ್ಕಾರದ ಮಂತ್ರಿಗಳು ಬಳ್ಳಾರಿಗೆ ಹೋಗಿ ಭೇಟಿ ನೀಡಲಿಲ್ಲ. ಹಾಸನದ ಸಮಾವೇಶ ಕಡೆ ಪೂರ್ತಿ ಗಮನ ಕೊಟ್ಟಿದ್ದರು. ನಾನು ಹೋಗಿ ಬಂದ ಮೇಲೆ ನಿನ್ನೆ ಆರೋಗ್ಯ ಸಚಿವರು ಭೇಟಿಯಾಗಿದ್ದಾರೆ. ಇದಾದ ಮೇಲೂ ರಾಜ್ಯದಲ್ಲಿ ಸಾವು ಮುಂದುವರೆದಿದೆ. ಡ್ರಗ್ ಮಾಫಿಯಾ, ಕಳಪೆ ಔಷಧ ಪೂರೈಕೆ ಮಾಡ್ತಾರೆ. ಹೈಕೋರ್ಟ್ ಜಡ್ಜ್ ಅವರ ಸಮ್ಮುಖದಲ್ಲಿ ತನಿಖೆ ಆಗಬೇಕು ಎಂದರು.
ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್, ಮಾಜಿ ಶಾಸಕ ಸಂಜಯ ಪಾಟೀಲ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ