Karnataka NewsPolitics

*ವಿಪಕ್ಷಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿ: ಸಂತೋಷ್ ಲಾಡ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡುತ್ತದೆ. ಬಿಜೆಪಿಯವರಿಗೆ ನಾವು ಸದನದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದೇವೆ. ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಆಸಕ್ತಿ ತೋರಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿಚಾರದಲ್ಲಿ ಬಿಜೆಪಿಯವರು ಆಸಕ್ತಿ ತೋರಿಸಲಿ. ಅಭಿವೃದ್ಧಿ ಬಿಟ್ಟು ಬಿಜೆಪಿಯವರು ಕೇವಲ ವಿವಾದಾತ್ಮಕ ಹಾಗೂ ರಾಜಕೀಯ ವಿಷಯಗಳ ಕುರಿತು ಚರ್ಚೆಗೆ ಹೋಗ್ತಾರೆ. ವಿಪಕ್ಷಗಳು ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬರಲಿ, ನಮ್ಮ ಸರ್ಕಾರ ಸಿದ್ದವಾಗಿದೆ. ಅಂಬೇಡ್ಕರ್ ಸೇವಾ ಕೇಂದ್ರ ನೂತನ ಕಾರ್ಯಕ್ರಮದ ಮೂಲಕ 43 ಭಾಗಗಳಲ್ಲಿ 43 ವಾಹನಗಳು ಸಂಚರಿಸಲಿವೆ. ಇಲಾಖೆಯ ಪ್ರತಿನಿಧಿಗಳು ನಮ್ಮ ಇಲಾಖೆಯಿಂದ ಲಾಭ ಪಡೆದ ಫಲಾನುಭವಿಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಿದ್ದಾರೆ. ಇದರಿಂದ ನಕಲಿ ಕಾರ್ಮಿಕ ಕಾರ್ಡ್ ಗಳ ಪತ್ತೆ ಹಚ್ಚಿ ಅವುಗಳ ರದ್ದತಿಗೆ ಸಹಕಾರವಾಗಲಿದೆ‌. ಬಡಿದಾಟ, ಹೊಡೆದಾಟ ಇಂಥವುಗಳಿಗೆ ನಾವು ಉತ್ತರ ಕೊಡುವುದಿಲ್ಲ. ಯಾವುದೇ ಸರ್ಕಾರಗಳು ಬಂದರೂ ಹೋರಾಟಗಳು ನಡೆಯುತ್ತವೆ, ಅದುವೆ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button