ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಮಾಡಿದ್ದ ವೇಳೆ ತೆಗೆದಿದ್ದ ಫೋಟೊಗಳಿದ್ದ ಬ್ಯಾನರ್ ಅಳವಡಿಸಿದನ್ನು ಪೊಲೀಸರು ತೆರವು ಮಾಡಿದ ವೇಳೆ ಹೈಡ್ರಾಮಾ ನಡೆದಿದೆ.
ಬೆಳಗಾವಿಯ ಅಂಬೇಡ್ಕರ್ ಗಾರ್ಡನ್‌ನ ಬಳಿ ಕೂಡಲಸಂಗಮ ಶ್ರೀಗಳ ಧರಣಿ ಪಕ್ಕದ ಸ್ಥಳದಲ್ಲಿ ಚೆನ್ನಮ್ಮ ನಾಡಲ್ಲೆ ಚನ್ನಮ್ಮನ ಮಕ್ಕಳ ರಕ್ತ ಹರಿದಿದೆ ಎಂಬ ಹೆಸರಿನಡಿ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಲಾಠಿಚಾರ್ಜ್ ಮಾಡಿರುವ, ಗಾಯಗೊಂಡ ಹೋರಾಟಗಾರರ ಫೋಟೊಗಳಿದ್ದ ಬ್ಯಾನರ್ ಗಳನ್ನು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪಂಚಮಸಾಲಿ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ.
ಬಳಿಕ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಪಂಚಮಸಾಲಿಗಳು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಲಾಠಿಚಾರ್ಜ್ ಮಾಡಲಾಗಿದ್ದ ಫೋಟೋಗಳಿದ್ದ ಬ್ಯಾನರ್ ಜಪ್ತಿ ಮಾಡಿದನ್ನು ಖಂಡಿಸಿ ಅಂಬೇಡ್ಕರ್ ವೃತ್ತದ ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ