ಪ್ರಗತಿವಾಹಿನಿ ಸುದ್ದಿ: ಮೂರು ಮಕ್ಕಳಿದ್ದರು ತನಗೆ ನೆರವು ಆಗಲಿಲ್ಲ. ಆದರೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಿಂದ ಮಹಿಳೆ ಸ್ವಾವಲಿಂಭಿ ಜೀವನ ಆರಂಭಿಸಿದ್ದಾಳೆ.
ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆ ಲಕ್ಷಾಂತರ ಮಹಿಳೆಯರಿಗೆ ನೆರವಾಗಿದ್ದು, ಯೋಜನೆಯ ಹಣದಿಂದ ನೂರಾರು ಮಹಿಳೆಯರು ಬದುಕಿಗೆ ದಾರಿ ಕಂಡುಕುಂಡಿರುವ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದೀಗ ಯಾದಗಿರಿಯಲ್ಲೂ ಅಂಥದ್ದೇ ಮತ್ತೊಂದು ನಿದರ್ಶನ ಕಾಣಸಿಕ್ಕಿದೆ.
ಯಾದಗಿರಿ ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು, ಪ್ರತಿ ತಿಂಗಳು ಬರುವ 2 ಸಾವಿರ ಹಣವನ್ನು ಕೂಡಿಟ್ಟು ಸುಮಾರು 10 ಸಾವಿರ ವೆಚ್ಚದಲ್ಲಿ ತರಕಾರಿ ತಳ್ಳುಗಾಡಿ ಖರೀದಿಸಿ ತರಕಾರಿ ವ್ಯಾಪಾರ ಆರಂಭಿಸಿ ಸ್ವಾವಲಂಬಿಯಾಗಿದ್ದಾರೆ. ಯಾದಗಿರಿಯ ಹುಣಸಗಿ ತಾಲ್ಲೂಕಿನ ಹೆಬ್ಬಾಳ ಎಂಬ ಗ್ರಾಮದ ಮಕ್ಕುಂಬಿ ನಬಿಸಾಬ್ ಅವರಿಗೆ ಸರ್ಕಾರದಿಂದ ಇಲ್ಲಿಯವರೆಗೆ ಬಂದ ಗೃಹಲಕ್ಷ್ಮಿಹಣದಲ್ಲಿ ಈ ಉದ್ಯೊಗ ಆರಂಭಿಸಿದ್ದಳೆ.
ಮಕ್ಕುಂಬಿಯವರ ಮೂರು ಮಕ್ಕಳ ಪೈಕಿ, ಇಬ್ಬರು ಪುತ್ರರು ಬೇರೆ ಮನೆ ಮಾಡಿಕೊಂಡಿದ್ದಾರೆ. ಪುತ್ರಿಗೆ ಮದುವೆ ಮಾಡಿಕೊಡಲಾಗಿದೆ. ಮಕ್ಕುಂಬಿ ಈಗಲೂ ತಾವೇ ದುಡಿದು ಜೀವನ ಸಾಗಿಸಬೇಕಿದೆ.
ಇದು ಸಾಲದು ಎಂಬಂತೆ ಕೆಲ ವರ್ಷಗಳ ಹಿಂದೆ ಮಕ್ಕುಂಬಿ ಬಿದ್ದು ಪೆಟ್ಟಾಗಿದ್ದು ಎರಡೂ ಕಾಲಿಗೂ ರಾಡ್ ಹಾಕಲಾಗಿದೆ. ಹೀಗಿದ್ದರೂ ಜೀವನ ನಡೆಸಲು ಗೃಹಲಕ್ಷ್ಮಿ ಹಣದಿಂದ ತರಕಾರಿ ವ್ಯಾಪಾರ ಆರಂಭಿಸಿದ್ದಾರೆ. ಇದೊಂದು ಉದಾಹರಣೆಯಾಗಿದ್ದು ಇದೆ ರೀತಿ ಸಾಕಷ್ಟು ಸ್ವಾವಲಂಭಿ ಮಹಿಳೆಯರು ಈ ಯೋಜನೆಯಿಂದ ಜೀವನ ಕಂಡುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ